ಗೋಣಿಕೊಪ್ಪಲು, ಡಿ. 7: ರಾಜ್ಯ ಕೇರಂ ಪ್ರಶಸ್ತಿ ವಿಜೇತ, ರಾಜ್ಯ ಮಟ್ಟದ ಕಬಡ್ಡಿ ಮತ್ತು ವಾಲಿಬಾಲ್ ಆಟಗಾರ, ವಿದ್ಯುತ್ ಇಲಾಖಾ ನೌಕರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಂ.ಕೆ. ರತ್ನಕುಮಾರ್ ಕಳೆದ 37 ವರ್ಷದಿಂದ ವಿದ್ಯುತ್ ಇಲಾಖೆಯಲ್ಲಿ ಮಾರ್ಗದಾಳು, ಯಂತ್ರಕರ್ಮಿ, ಮೇಲ್ವೀಚಾರಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ್ದಾರೆ.ಪೆÇನ್ನಂಪೇಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ರತ್ನಕುಮಾರ್ ಅವರ 37 ವರ್ಷದ ಸೇವೆಯನ್ನು ಪರಿಗಣಿಸಿ ಇಲಾಖಾ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.

ಮಡಿಕೇರಿ, ಗೋಣಿಕೊಪ್ಪಲು ಹಾಗೂ ಪೆÇನ್ನಂಪೇಟೆಯಲ್ಲಿ ಸೇವೆ ಸಲ್ಲಿಸಿದ್ದ ರತ್ನಕುಮಾರ್ ಅವರು ವಿದ್ಯುತ್ ಇಲಾಖೆ ನೌಕರರಲ್ಲಿ ಒಗ್ಗಟ್ಟು ಮೂಡಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಸಿಗುವಲ್ಲಿಯೂ ಸಹಕಾರಿಯಾಗಿದ್ದಾರೆ ಎಂದು ಗೋಣಿಕೊಪ್ಪಲು ಸೆಸ್ಕ್ ಉಪವಿಭಾಗದ ಕಾರ್ಯಪಾಲಕ ಅಭಿಯಂತರ ಮತ್ತು ಜಿಲ್ಲಾ ವಿದ್ಯುತ್ ಇಲಾಖೆಯ ಸಿಇಸಿ ಎಂ. ಅಂಕಯ್ಯ ಸ್ಮರಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರತ್ನಕುಮಾರ್ ಅವರು ವಿದ್ಯುತ್ ಇಲಾಖೆಯಲ್ಲಿನ ಕೆಲಸ ಅಪಾಯಕಾರಿ. ಶ್ರದ್ಧೆ ಹಾಗೂ ಕರ್ತವ್ಯ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು. ಜೀವಹಾನಿಯಾಗದಂತೆ ಎಚ್ಚರವಹಿಸಬೇಕು ಎಂದು ತಮ್ಮ ಸಹಪಾಠಿಗಳಿಗೆ ಕಿವಿಮಾತು ಹೇಳಿದರು.

ಮಡಿಕೇರಿ ಸಹಾಯಕ ಕಾರ್ಯಪಾಲಕ ಅಭಿಯಂತರ ಪಾಲಚಂಡ ದೇವಯ್ಯ, ವೀರಾಜಪೇಟೆ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್, ಕಿರಿಯ ಅಭಿಯಂತರ ಕೃಷ್ಣಕುಮಾರ್, ನಿಷ್ಮಾ, ಹೇಮರಾಜ್, ಜಾನ್ ಮೈಕಲ್, ಕೆಪಿಟಿಸಿಎಲ್ ಲೆಕ್ಕಾಧಿಕಾರಿ ಲಿಂಗರಾಜ್, ರುದ್ರಪ್ಪ ಚೆನ್ನಬಸಪ್ಪ, ಗೋಣಿಕೊಪ್ಪಲು ನೌಕರರ ಸಂಘದ ಪ್ರಾಥಮಿಕ ಸಮಿತಿ ಅಧ್ಯಕ್ಷ ಅಂತೋಣಿ ಕಿರಣ್, ಸುಬ್ರಮಣಿ, ನೌಕರರ ಕಲ್ಯಾಣ ಸಂಸ್ಥೆಯ ವೆಂಕಟೇಶ್, ಗುತ್ತಿಗೆದಾರ ಪ್ರಸನ್ನ, ಸಯ್ಯದ್ ಅಬ್ರಹಾರ್ ಮುಂತಾದವರು ಮಾತನಾಡಿದರು.

ಗೋಣಿಕೊಪ್ಪಲು, ಪೆÇನ್ನಂಪೇಟೆ, ಬಾಳೆಲೆ ಹಾಗೂ ಮಡಿಕೇರಿಯ ಕೆಪಿಟಿಸಿಎಲ್ ಇಲಾಖೆಯ ವತಿಯಿಂದ ರತ್ನಕುಮಾರ್ ಹಾಗೂ ಪತ್ನಿ ವಿಜಯಕುಮಾರಿ ಅವರಿಗೆ ಪ್ರತ್ಯೇಕವಾಗಿ ಸನ್ಮಾನಿಸಲಾಯಿತು.