ಮಡಿಕೇರಿ, ಡಿ.6 : ಟೂರ್ ಆಫ್ ನೀಲಗಿರೀಸ್ 1 ಸಾವಿರ ಕಿ.ಮೀ. ಅಂತರ ಗುರಿಯಾಗಿರಿಸಿಕೊಂಡು 10 ನೇ ವರ್ಷದ ಪಯಣ ಪ್ರಾರಂಭಿಸಿದ್ದು ಕೊಡಗಿನ ಕುಶಾಲನಗರಕ್ಕಾಗಿ ತಾ. 11 ರಂದು ತೆರಳಲಿರುವ ತಂಡದಲ್ಲಿ ದೇಶವಿದೇಶಗಳ 128 ಸೈಕ್ಲಿಸ್ಟ್ಗಳು ಪಯಣಿಗರಾಗಿದ್ದಾರೆ.
ತಾ. 11 ರಂದು ಬೆಳಿಗ್ಗೆ ಮೈಸೂರಿನಿಂದ ಹೊರಟು, 162 ಕಿ.ಮೀ ಕ್ರಮಿಸಿ ಅದೇ ದಿನ ಕುಶಾಲನಗರಕ್ಕೆ ಬರಲಿರುವ ಸೈಕ್ಲಿಸ್ಟ್ಗಳು ತಾ. 12ರಂದು 145 ಕಿ.ಮೀ ಸೈಕಲ್ ಮೂಲಕ ಕಡಿದಾದ ತಿರುವುಗಳ ರಸ್ತೆಯಲ್ಲಿ ಕೇರಳದ ಸುಲ್ತಾನ್ ಬತೇರಿ ತಲುಪಲಿದ್ದಾರೆ.
ಲಾಭದ ಉದ್ದೇಶ ಹೊಂದದ ರೈಡ್ ಎ ಸೈಕಲ್ ಪ್ರತಿಷ್ಠಾನ ಜನಸಾಮಾನ್ಯರಲ್ಲಿ ಸೈಕ್ಲಿಂಗ್ನ್ನು ಜನಪ್ರಿಯಗೊಳಿಸಲು ಶ್ರಮಿಸುತ್ತಿರುವ ಪ್ರಮುಖ ಸಂಸ್ಥೆಯಾಗಿದ್ದು, ವಿರಾಮದ ವೇಳೆ ಸಾಮಾಜಿಕ ಬದಲಾವಣೆ ಹಾಗೂ ಮುಖ್ಯವಾಗಿ ರಾಷ್ಟ್ರಮಟ್ಟದಲ್ಲಿ ಸೈಕ್ಲಿಂಗ್ ಪ್ರತಿಭೆಯನ್ನು ಪೆÇ್ರೀತ್ಸಾಹಿಸುತ್ತಾ ಬಂದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ 128 ಸೈಕ್ಲಿಸ್ಟ್ ಗಳು ಟೂರ್ ಆಫ್ ನೀಲಗಿರೀಸ್ ನಲ್ಲಿ ಭಾಗವಹಿಸುತ್ತಿದ್ದಾರೆ. 10ನೇ ವರ್ಷದ ಈ ಮಹತ್ವದ ಪ್ರವಾಸ ಸೈಕಲ್ ಕಂಡು ಹಿಡಿದು 200 ವರ್ಷದ ಸಮಯದಲ್ಲಿ 10 ನೇ ವರ್ಷದ ಟೂರ್ ಆಫ್ ನೀಲಗಿರೀಸ್ ನಡೆಯುತ್ತಿದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಾದುಹೋಗಲಿದೆ.
ತಾ. 10 ರಂದು ಬೆಂಗಳೂರಿನಿಂದ ಪಯಣ ಪ್ರಾರಂಭಿಸಲಿರುವ ಸೈಕಲಿಸ್ಟ್ಗಳು 17 ರಂದು ಊಟಿಯಲ್ಲಿ ಯಾತ್ರೆ ಸಮಾರೋಪಗೊಳಿಸಲಿದ್ದಾರೆ. ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ಸುಲ್ತಾನ್ ಬತೇರಿ, ಉದಕಮಂಡಲ ಸಾಗಿ ಮತ್ತೆ ಮೈಸೂರಿಗೆ ಹಿಂದಿರುಗಲಿದ್ದಾರೆ. ಕಠಿಣ ತಿರುವು, ಇಳಿಜಾರು, ಸಮತಟ್ಟಾದ ರಸ್ತೆ, ಬೆಟ್ಟ, ಕಾಫಿ ಮತ್ತು ಚಹಾ ತೋಟದ ಮೂಲಕ ಸುಮಾರು 1,000 ಕಿ.ಮೀ. ದೂರ ಕ್ರಮಿಸಲಿದ್ದಾರೆ. ಸ್ಪರ್ಧಾತ್ಮಕ ವಿಭಾಗ ಕೂಡ ಈ ಬಾರಿ ಇದ್ದು , ಸೈಕ್ಲಿಸ್ಟ್ ಗಳು ತಮ್ಮ ನೈಪುಣ್ಯತೆ ತೋರಲು ಅವಕಾಶ ಕಲ್ಪಿಸಿದೆ.
ಈ ಬಾರಿಯ 128 ಸೈಕ್ಲಿಸ್ಟ್ ಪೈಕಿ 120 ಮಂದಿ ಪುರುಷರು, ಎಂಟು ಮಂದಿ ಮಹಿಳೆಯರು ಪಾಲ್ಗೊಂಡಿದ್ದಾರೆ. ಇವರಲ್ಲಿ 110 ಮಂದಿ ಭಾರತದ ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದು 18 ಮಂದಿ ನೆದರ್ಲೆಂಡ್,ಜರ್ಮನಿ, ಸ್ವೀಡನ್, ಡೆನ್ಮಾರ್ಕ್, ಆಸ್ಟ್ರೇಲಿಯಾ, ಅಮೆರಿಕ ಹಾಗೂ ರಷ್ಯಾದವರಾಗಿದ್ದಾರೆ.