ಗೋಣಿಕೊಪ್ಪಲು,ಡಿ. 6 : ಕೊಡಗು ಬಲಿಜ ಸಮಾಜದ ವತಿಯಿಂದ ಪ್ರಥಮ ವರ್ಷದ ಕ್ರೀಡೋತ್ಸವ ನಡೆಸಲು ವೇದಿಕೆ ಸಜ್ಜಾಗಿದೆ.ಬ ಗೋಣಿಕೊಪ್ಪಲಿನಲ್ಲಿ ಕೊಡಗು ಜಿಲ್ಲಾ ಮಟ್ಟದ ಬಲಿಜ ಕುಟುಂಬಗಳ ನಡುವಿನ ಕ್ರೀಡಾಕೂಟದ ಪೂರ್ವಭಾವಿ ಸಭೆ ತಾ.10 ರಂದು ನಡೆಯಲಿದೆ.
ಸಮಾಜದ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪಲು ಪ್ರಕಾಶ್ ಇಂಟರ್‍ನ್ಯಾಷನಲ್ ಹೋಟೆಲ್‍ನಲ್ಲಿ ಬೆಳಿಗ್ಗೆ 10.30 ಕ್ಕೆ ಸಭೆ ಆರಂಭಗೊಳ್ಳಲಿದ್ದು ವಿವಿಧ ಕ್ರೀಡೆಗಳನ್ನು ಆಯೋಜಿಸುವ ಬಗ್ಗೆ ಹಿರಿಯರ ಸಮ್ಮುಖದಲ್ಲಿ ಚರ್ಚೆನಡೆಯಲಿದೆ.
ಜಿಲ್ಲೆಯಲ್ಲಿ ಸುಮಾರು 8000 ಕ್ಕೂ ಅಧಿಕ ಬಲಿಜ ಕುಟುಂಬಗಳಿದ್ದು, ಇದೇ ಸಂದರ್ಭ ಬಲಿಜ ಜನಗಣತಿ ಕಾರ್ಯಕ್ರಮವನ್ನು ಚುರುಕುಗೊಳಿಸಲಾಗುವದು. ಬಲಿಜ ಕ್ರೀಡೋತ್ಸವಕ್ಕೆ ರಾಜ್ಯಮಟ್ಟದ ಜನಾಂಗದ ಪ್ರಮುಖ ನಾಯಕರನ್ನು ಆಹ್ವಾನಿಸಲಾಗುತ್ತಿದೆ. ಕೊಡಗಿನ ಬಲಿಜ ಜನಾಂಗ ಶತಮಾನಗಳಿಂದಲೂ ಜಿಲ್ಲೆಯಲ್ಲಿ ಎಲೆ ಮರೆಯ ಕಾಯಿಯಂತೆ ವಾಸಮಾಡುತ್ತಿದ್ದು ಇದೇ ಪ್ರಥಮ ಬಾರಿಗೆ ಕ್ರೀಡಾಕೂಟದ ಮೂಲಕ ಜಿಲ್ಲೆಯ ಸಾವಿರಾರು ಬಲಿಜ ಜನಾಂಗವನ್ನು ಒಗ್ಗೂಡಿಸಲು ಪ್ರಯತ್ನ ಸಾಗಿದೆ ಎಂದು ಟಿ.ಎಲ್.ಶ್ರೀನಿವಾಸ್ ತಿಳಿಸಿದ್ದಾರೆ.