ಕುಶಾಲನಗರ, ಡಿ. 6: ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಕುಶಾಲನಗರದಲ್ಲಿ ನಡೆಯುತ್ತಿರುವ ಸರಣಿ ಧರಣಿಯಲ್ಲಿ ಬುಧವಾರ ಕುಶಾಲನಗರ ಹೋಬಳಿ ವೀರಶೈವ ಸಮಾಜದ ಪದಾಧಿಕಾರಿಗಳು ಪಾಲ್ಗೊಂಡರು.
ಪಟ್ಟಣದ ಗುಂಡುರಾವ್ ಸತ್ಯಾಗ್ರಹ ವೇದಿಕೆಯಲ್ಲಿ ಧರಣಿಯಲ್ಲಿ ಪಾಲ್ಗೊಂಡ ಸಮಾಜದ ಪದಾಧಿಕಾರಿಗಳು ಹಾಗೂ ಸದಸ್ಯರು ತಾಲೂಕು ರಚನೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಸಮಾಜದ ಅಧ್ಯಕ್ಷ ಎಂ.ಎಸ್. ಶಿವಾನಂದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ, ಸದಸ್ಯ ಹೆಚ್.ಎಂ.ಮಧುಸೂದನ್, ಸಮಾಜದ ಪ್ರಮುಖರಾದ ಬಿ.ಬಿ.ಲೋಕೇಶ್, ಸದಾಶಿವ, ಎಸ್.ಕೆ.ಕಾಳಿಂಗಪ್ಪ, ಪರಶಿವಮೂರ್ತಿ, ವಿಜಯಮ್ಮ ಪಾಲಾಕ್ಷ, ನೇತ್ರಾವತಿ, ಸರೋಜ ಆರಾಧ್ಯ, ಭಾಗ್ಯ, ಗೀತಾ ಮತ್ತಿತರರು ಇದ್ದರು.