ಕುಶಾಲನಗರ, ಡಿ. 4 : ಕುಶಾಲನಗರದ ದಾರುಲ್ ಉಲೂಂ ಮದ್ರಸ ಮತ್ತು ಹಿಲಾಲ್ ಮಸೀದಿ ಆಶ್ರಯದಲ್ಲಿ ವಿಶ್ವ ಪ್ರವಾದಿ ಮಹಮ್ಮದ್ ಮುಸ್ತಫಾ ಜನ್ಮದಿನಾಚರಣೆ ಅಂಗವಾಗಿ ಬೃಹತ್ ಮಿಲಾದ್ ಸೌಹಾರ್ದ ರ್ಯಾಲಿ ನಡೆಯಿತು. ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನೆರವೇರಿತು. ಮಸೀದಿಯ ಧರ್ಮಗುರುಗಳು ದಿನದ ಮಹತ್ವದ ಕುರಿತು ಸಾಮೂಹಿಕ ಸಂದೇಶ ಸಾರಿದರು. ಮದರಸದ ವಿದ್ಯಾರ್ಥಿ ಗಳಿಂದ ಆಕರ್ಷಕ ಧಪ್ ನೃತ್ಯ ಗಮನ ಸೆಳೆಯಿತು.
ಬೈಚನಹಳ್ಳಿಯಿಂದ ಜನಾಂಗ ಬಾಂಧವರು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ದಂಡಿನಪೇಟೆವರೆಗೆ ತೆರಳಿ ಶಾದಿ ಮಹಲ್‍ಗೆ ಮರಳಿದರು.
ಹಿಲಾಲ್ ಮಸೀದಿಯ ಧರ್ಮ ಗುರುಗಳಾದ ಸೂಫಿದಾರಿಮಿ ಪ್ರಮುಖರಾದ ಜನಾಬ್ ಸಲೀಮ್, ಮೂಸ, ಅಬ್ದುಲ್ ರೆಹಮಾನ್, ಉನೈಸ್ ಫೈಸಿ, ನಜೀರ್ ಅಹಮ್ಮದ್ ಸಮುದಾಯ ಬಾಂಧವರು ಇದ್ದರು.