ನಾಪೆÉÇೀಕ್ಲು, ಡಿ. 4: ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಯಾರ ಒಪ್ಪಿಗೆಯೂ ಇಲ್ಲದೆ ಅನಧಿಕೃತವಾಗಿ ಬೇರೊಬ್ಬರ ಹೆಸರಿಗೆ ವರ್ಗಾಯಿಸುವದರ ಮೂಲಕ ಕಂದಾಯ ಇಲಾಖೆಯು ತÀಮ್ಮ ಕುಟುಂಬವನ್ನು ವಂಚಿಸಿದೆ ಎಂದು ಜಾಗದ ಮಾಲೀಕರಾದ ದೈನಾಬ ಅವರ ಪುತ್ರ ಸಿ.ಹೆಚ್ ಮೊಯಿದು ಮತ್ತು ಸಂಬಂಧಿ ಎಂ.ಯು. ಮಹಮ್ಮದ್ ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎಮ್ಮೆಮಾಡು ಗ್ರಾಮದ ಸರ್ವೆ ನಂ. 220/2 ರ ಜಾಗವು ನಮ್ಮ ಪಿತ್ರಾರ್ಜಿತ ಆಸ್ತಿಯಾಗಿದ್ದು, ನಮ್ಮ ತಾಯಿ ದೈನಾಬ ಅವರಿಗೆ ಸೇರಬೇಕಾಗಿದೆ. ಸದರಿ ಜಾಗವನ್ನು ಕಬಳಿಸುವ ಸಲುವಾಗಿ ಕುಂಞಮು ಮತ್ತು ಕುಲ್ಸು ಇವರುಗಳು 2013 ರಲ್ಲಿ ಕಂದಾಯ ಇಲಾಖೆಯ ತಹಶೀಲ್ದಾರ್ ಕುಂಞಮ್ಮ ಅವರ ಮುಖಾಂತರ ನಕಲಿ ಸಹಿ ಬಳಸಿ ಜಾಗ ಕಬಳಿಸಲು ಯತ್ನಿಸಿದ್ದರು. ಆ ಸಂದರ್ಭ ನಾವುಗಳು ಈ ಜಾಗ ನಮಗೆ ಸೇರಿರುವ ಬಗ್ಗೆ ಹಾಗೂ ಈ ಬಗ್ಗೆ ಯಾವದೇ ದಾಖಲಾತಿ ವ್ಯವಹಾರ ನಡೆಸಬಾರದೆಂದು ಲಿಖಿತ ಅರ್ಜಿ ಸಲ್ಲಿದ್ದೇವೆ. ಆದರೂ ನಮ್ಮ ಅರ್ಜಿಯನ್ನು ಕಡೆಗಣಿಸಿ ನಮಗೆ ಸೇರಿದ ಪಿತ್ರಾರ್ಜಿತ ಜಾಗವನ್ನು ನಕಲಿಯಾಗಿ ಅವರ ಹೆಸರಿಗೆ 2015 ರಲ್ಲಿ ಆರ್‍ಟಿಸಿ ಮಾಡಿಕೊಟ್ಟಿರುತ್ತಾರೆ. ಈ ಕಾರ್ಯದಲ್ಲಿ ಆಗಿನ ತಹಶೀಲ್ದಾರ್ ಕುಂಞಮ್ಮ, ನಾಪೆÇೀಕ್ಲು ಕಂದಾಯ ಪರಿವೀಕ್ಷಕ ರಾಮಯ್ಯ ಮತ್ತು ಗ್ರಾಮ ಲೆಕ್ಕಿಗೆ ಶರ್ಮಿಳಾ ಕಾರಣರಾಗಿದ್ದಾರೆ. ನಮ್ಮ ತಾಯಿಯ ಜಾಗವನ್ನು ವಿಂಗಡಿಸಲು ಯಾವದೇ ಸರ್ವೆ ಕಾರ್ಯವನ್ನು ನಡೆಸದೇ ವಂಚಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ನಮ್ಮ ಆಸ್ತಿಯನ್ನು ನಮಗೆ ಉಳಿಸಿಕೊಡಬೇಕೆಂದು ಹೇಳಿದರು.