ಮಡಿಕೇರಿ, ಡಿ. 5: ಸುರ್ವೆ ಕಲ್ಚರಲ್ ಅಕಾಡೆಮಿಯ ಬೆಳ್ಳಿಹಬ್ಬ ಬೆಳಗಾವಿ ಜಿಲ್ಲೆಯ ಅಥಣಿಯ ಸಾಹಿತಿ ಅಪ್ಪಾಸಾಹೇಬ್ ಅಲಿಬಾದಿ ಅಧ್ಯಕ್ಷತೆಯಲ್ಲಿ ಜರುಗಲಿದೆ.

ಈ ಹಿನ್ನೆಲೆ ಮಾಸ್ತಿ ಕಥಾಸ್ಪರ್ಧೆ ಏರ್ಪಡಿಸಲಾಗಿದೆ. 2 ಪುಟಗಳ ಒಂದು ಸಣ್ಣಕಥೆ ರಚಿಸಿ ಕಳುಹಿಸಿ. ಕಥೆ ಅನುವಾದವಾಗಿರಬಾರದಷ್ಟೆ. 2 ಪುಟದ ಹಿಂಭಾಗ ನಿಮ್ಮ ವಿಳಾಸ, ದೂರವಾಣಿ ಹಾಗೂ 2 ಫೋಟೋ ಇರಲಿ. ಕಥೆ ಕಳುಹಿಸಲು ತಾ. 15 ಕೊನೆಯ ದಿನವಾಗಿದ್ದು, ಆಯ್ಕೆಯಾದ 10 ಕಥೆ ಮಾಸ್ತಿ ಪ್ರಶಸ್ತಿಯ ಗೌರವ ಕಥಾ ಸಂಕಲದ ರೂಪದಲ್ಲಿ ಪ್ರಕಟಗೊಳ್ಳಲಿದೆ.

ಕವನ ಮತ್ತು ಚುಟುಕು ವಾಚನ

ಸ್ವರಚಿತ ಕವನವನ್ನು ವಾಚನ ಮಾಡಲು ಅವಕಾಶವಿದೆ. 4 ದಿನದಲ್ಲಿ ತಮ್ಮ ಅನುಕೂಲಕ ದಿನ ಭಾಗವಹಿಸಿ ಕವನ ವಾಚಿಸಬಹುದು. ಕವನದ ಡಿಟಿಪಿ ಪ್ರತಿಯೊಂದಿಗೆ ಹಿಂಬದಿಯಲ್ಲಿ, ಪೂರ್ಣ ವಿಳಾಸ ಹಾಗೂ 2 ಫೋಟೋ ಲಗತ್ತಿಸಬೇಕಾದದ್ದು ಕಡ್ಡಾಯ.

ನೃತ್ಯ ಪ್ರದರ್ಶನ

ಭರತನಾಟ್ಯ, ಜನಪದ ನೃತ್ಯ, ಚಲನಚಿತ್ರ ನೃತ್ಯ, ಎಲ್ಲಾ ರೀತಿಯ ಪಾಶ್ಚಾತ್ಯ ಹಾಗೂ ಭಾರತೀಯ ನೃತ್ಯ ಪ್ರದರ್ಶನಕ್ಕೆ ಅವಕಾಶವಿದೆ. ಸಮೂಹ ನೃತ್ಯಗಳು ಸ್ವಾಗತಾರ್ಹ. ಒಂದು ತಂಡದಲ್ಲಿ 8 ರಿಂದ 10 ಜನಕ್ಕೆ ಅವಕಾಶವಿರುತ್ತದೆ. ನೃತ್ಯ ಶಾಲೆಗಳಿಗೆ ವಿಶೇಷ ರಿಯಾಯಿತಿ ಹಾಗೂ ಗೌರವವಿರುತ್ತದೆ. ಶಾಲೆಗಳ ನೃತ್ಯ ನಿರ್ದೇಶಕರು ತಮ್ಮ ಶಾಲೆಯನ್ನು ಈ ಪ್ರದರ್ಶನದಲ್ಲಿ ತೊಡಗಿಸಿಕೊಳ್ಳಬಹುದು.

ಗಾಯನ

ಕನ್ನಡ ಸಂಗೀತ ಕ್ಷೇತ್ರದಲ್ಲಿರಬಹುದಾದ ನೂರಾರು ಮಾದರಿಯ ಗಾಯನಕ್ಕೆ ಅವಕಾಶವಿದೆ. ಭಕ್ತಿಗೀತೆ, ಭಾವಗೀತೆ, ಜನಪದ ಗೀತೆ, ರಂಗಗೀತೆ, ಯಕ್ಷಗೀತೆ ಹಾಗೂ ಮೂಲ ಜಾನಪದ ಗೀತೆ, ಭಜನಾ ಗೀತೆಗಳಿಗೆ ವೈಯಕ್ತಿಕ ಹಾಗೂ ತಂಡ ರೂಪದಲ್ಲಿ ಅವಕಾಶವಿದೆ. ಕರೋಕೆ ಸಂಗೀತದಲ್ಲಿ ಹಾಡಬಹುದು.

ಇತರ ಕಲಾ ಪ್ರದರ್ಶನ

ಸಾಂಸ್ಕøತಿಕ ಪ್ರಾಕಾರದಲ್ಲಿ ಯಾವದೇ ಸಾಂಸ್ಕøತಿಕ ಪ್ರದರ್ಶನಕ್ಕೆ ಕಲಾವಿದರು, ತಮ್ಮ ಪ್ರದರ್ಶನಗಳನ್ನು ನೀಡಲು 200ಕ್ಕೂ ಹೆಚ್ಚು ಕಲಾ ಪ್ರಾಕಾರಕ್ಕೆ ಅವಕಾಶವಿದೆ. ವೇಷಭೂಷಣ ಹಾಗೂ ಹಿನ್ನೆಲೆ ಸಂಗೀತಕ್ಕೆ ಹೆಚ್ಚಿನ ಮಹತ್ವವಿದೆ.

ಉಪನ್ಯಾಸ

ಮಾಸ್ತಿಯವರ ಕಥೆ, ಕಾದಂಬರಿ, ಕಾವ್ಯ ಹಾಗೂ ಅವರ ಸಾಹಿತ್ಯ ಕೃತಿಗಳನ್ನು ಕುರಿತು ಉಪನ್ಯಾಸ ನೀಡಲು ಅರ್ಹರು ಪ್ರಯತ್ನಿಸಬಹುದು. ಉಪನ್ಯಾಸದ ಅವಧಿ 10 ನಿಮಿಷ. ಉಪನ್ಯಾಸವನ್ನು ಬರೆದು ವಾಚಿಸಲು 10 ನಿಮಿಷಕ್ಕೆ ಹೊಂದಿಸಿ ಮಾತನಾಡಬೇಕು ಅಥವಾ ಓದಬಹುದು. ಬರವಣಿಗೆ 4 ಪುಟ ಮೀರದಂತಿರಲಿ. 4 ದಿನದಲ್ಲಿ ಒಂದು ದಿನ ಭಾಗವಹಿಸಲು ಅವಕಾಶವಿರುತ್ತದೆ. ಬರಹದ ಡಿಟಿಪಿ ಪ್ರತಿ ನೀಡಬೇಕು.

ಹಿರಿಯರ ಪ್ರಶಸ್ತಿ ವಿಭಾಗ

ನಾಡಿನ ಜಲ, ನೆಲ, ಭಾಷೆ, ಸಂಸ್ಕøತಿ, ಶಿಕ್ಷಣ, ಕ್ರೀಡೆ ಹೀಗೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯರಿಗೆ ನೇರವಾದ ಆಯ್ಕೆ ಮುಖಾಂತರ ಆಯ್ಕೆ ಮಾಡಿ, ಅವರಿಗೆ ರಾಜ್ಯ ಅಥವಾ ರಾಷ್ಟ್ರಮಟ್ಟದ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುತ್ತದೆ. ಅರ್ಹರು 2 ಫೋಟೋ, ಬಯೋಡೆಟಾ ಕಳಿಸಬಹುದು. ವಿಶೇಷ ಸಾಧಕರಿಗೆ ಕರ್ನಾಟಕ ಬೆಳ್ಳಿ ಕಿರಣ ಅಥವಾ ರಾಷ್ಟ್ರೀಯ ಬೆಳ್ಳಿ ಕಿರಣ ಪ್ರಶಸ್ತಿಯ ಗೌರವವಿರುತ್ತದೆ.

ಯಾವದೇ ರೀತಿ ಭಾಗವಹಿಸಲು ತಾ. 15 ಅರ್ಜಿ ಸಲ್ಲಿಸಲು ಕೊನೆಯ ದಿನ. ಭಾಗವಹಿಸುವವರು ವಿಳಾಸವನ್ನು ಮೊಬೈಲ್ ಸಂಖ್ಯೆ 9845307327ಗೆ ಎಸ್‍ಎಂಎಸ್ ಮಾಡಿ ಕಾರ್ಯಕ್ರಮ ಅರ್ಜಿ ಬ್ರೋಚರ್ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ. ಸಂಪರ್ಕಿಸುವ ವಿಳಾಸ: ರಮೇಶ ಸುರ್ವೆ, ಸಂಸ್ಥಾಪಕ ಅಧ್ಯಕ್ಷರು, ಸುರ್ವೆ ಕಲ್ಚರಲ್ ಅಕಾಡೆಮಿ, ನಂ. 468/ ಸುರ್ವೆ, 13ನೇ ಮೇನ್, 3ನೇ ಹಂತ, ಮಂಜುನಾಐನಗರ, ಬೆಂಗಳೂರು - 560010. ಮೊಬೈಲ್ 9845307327.