ಶ್ರೀಮಂಗಲ, ಡಿ. 4: ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ತಾಲೂಕು ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ಮಾಚಯ್ಯ ನೇತೃತ್ವದ ನಿಯೋಗಕ್ಕೆ ಮುಖ್ಯಮಂತ್ರಿ ಸಕರಾತ್ಮಕವಾಗಿ ಸ್ಪಂದಿಸಿರುವದು ಸ್ವ್ವಾಗತಾರ್ಹ ಎಂದು ಪೊನ್ನಂಪೇಟೆ ಕೊಡವ ಸಮಜದ ಅಧ್ಯಕ್ಷ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ ಹೇಳಿದರು.
ಪೊನ್ನಂಪೇಟೆ ಗಾಂಧಿ ಪ್ರತಿಮೆ ಎದುರು ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ 33 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಿರಿಯ ನಾಗರಿಕ ವೇದಿಕೆಯ ಉಪಾಧ್ಯಕ್ಷ ಚೆಪ್ಪುಡಿರ ಸೋಮಯ್ಯ ಮಾತನಾಡಿ ಪೊನ್ನಂಪೇಟೆ ತಾಲೂಕು ರಚನೆಯಿಂದ ಸರ್ಕಾರಕ್ಕೆ ಯಾವದೇ ಹೆಚ್ಚಿನ ಹೊರೆಯಾಗದು. ಈಗಾಗಲೇ ತಹಶೀಲ್ದಾರ್, ಸರ್ವೆ ಕಚೇರಿ ಮತ್ತು ಡಿವೈಎಸ್ಪಿ ಹೊರತುಪಡಿಸಿ ಬಹುತೇಕ ಎಲ್ಲಾ ತಾಲೂಕು ಕೇಂದ್ರಗಳು ಪೊನ್ನಂಪೇಟೆಯಲ್ಲಿದೆ. ತಾಲೂಕು ಬೇಡಿಕೆ ಸರ್ಕಾರ ಮಟ್ಟದಲ್ಲಿ ಆಗಬೇಕಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಲು ಶಾಸಕರು ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ, ಜಿ.ಪಂ ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ, ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೆಪ್ಪುಡಿರ ಪೊನ್ನಪ್ಪ, ಹಿರಿಯರಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಕೋಟೆರ ಕಿಶಾನ್, ಮೂಕಳೆರ ಲಕ್ಷ್ಮಣ್, ಚೋಡುಮಾಡ ಸೂರತ್, ಅಪ್ಪೇಂಗಡ ಸೋಮಯ್ಯ, ಪಿ.ಪಿ.ಪ್ರಭಾಕರ್, ಬಿ.ಬಿ.ಚಿಣ್ಣಪ್ಪ, ಮತ್ರಂಡ.ಪಿ.ಅಪ್ಪಚ್ಚು, ಸಂದೇಶ ನೆಲ್ಲಿತ್ತಾಯ, ಎಂ.ಪಿ. ಮೊಣ್ಣಪ್ಪ, ಕೆ.ಎ.ವಿಠಲ, ಸಿ.ಎನ್. ಅಪ್ಪಯ್ಯ, ತಾಣಚ್ಚಿರ ಕುಶಾಲಪ್ಪ, ಪಿ.ಕೆ. ಪೊನ್ನಪ್ಪ, ಕೆ.ಕೆ.ಭೀಮಯ್ಯ, ಚಿಮ್ಮಣಮಾಡ.ಎನ್. ವಾಸು, ಎಂ.ಸಿ. ದೇವಯ್ಯ, ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.