ಮಡಿಕೇರಿ, ಡಿ. 5: ಮಡಿಕೇರಿ ನಗರ ಗೌಡ ನಾಗರಿಕ ಹುತ್ರಿ ಸಮಿತಿ ವತಿಯಿಂದ ಹುತ್ತರಿ ಹಬ್ಬವನ್ನು ಸಮಿತಿಯ ಅಧ್ಯಕ್ಷ ಪರಿವಾರ ಅಪ್ಪಾಜಿ ಅವರ ಮುಂದಾಳುತನದಲ್ಲಿ ಆಚರಿಸಲಾಯಿತು.
ಕೊಡಗು ಗೌಡ ವಿದ್ಯಾ ಸಂಘದ ಆವರಣದಲ್ಲಿ ಪೊನ್ನಚನ ಮಧು ಸೋಮಣ್ಣ ಅವರು ಕದಿರು ತೆಗೆದರು. ನಂತರ ಆಗಮಿಸಿದ್ದವರಿಗೆ ಕದಿರು ವಿತರಣೆ ಮಾಡಲಾಯಿತು.
ಈ ಸಂದರ್ಭ ಸಮಿತಿಯ ಸಹಕಾರ್ಯದರ್ಶಿ ಕುಟ್ಟನ ತಿಮ್ಮಯ್ಯ, ಖಜಾಂಚಿ ಪೊನ್ನಚನ ಸೋಮಣ್ಣ, ಸಂಚಾಲಕರಾದ ಕುಂಬುಗೌಡನ ಭೀಮಯ್ಯ, ಚೆರಿಯಮನೆ ತಿಮ್ಮಯ್ಯ, ಪೊನ್ನೇಟಿ ಚಿಣ್ಣಪ್ಪ, ಕೋಡಿ ಮುತ್ತಪ್ಪ, ಮೊಟ್ಟೇರ ಬೆಳ್ಯಪ್ಪ, ಪೂಜಾರೀರ ಬೆಳ್ಯಪ್ಪ, ಸೂದನ ಹರೀಶ, ಪಾಣತ್ತಲೆ ಬಿದ್ದಪ್ಪ, ಬೈಚನ ಸೋಮಣ್ಣ ಮತ್ತು ಅಧಿಕ ಸಂಖ್ಯೆಯಲ್ಲಿ ಜನಾಂಗ ಬಾಂಧವರು ಭಾಗವಹಿಸಿದ್ದರು.