ಮಡಿಕೇರಿ, ಡಿ. 4: ಯುವಕರು ಮಾದಕ ವಸ್ತುಗಳಿಗೆ ದಾಸರಾಗದೆ, ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಉತ್ತಮ ಬದುಕು ಕಟ್ಟಿಕೊಳ್ಳುವಂತಾಗ ಬೇಕು. ಹಾಗೆಯೇ ಯುವಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸರ್ಕಾರಿ ಜಿಲ್ಲಾ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕೆ. ಈಶ್ವರಿ ಸಲಹೆ ಮಾಡಿದ್ದಾರೆ.

ನೆಹರು ಯುವ ಕೇಂದ್ರ, ಮಡಿಕೇರಿ ತಾಲೂಕು ಯುವ ಒಕ್ಕೂಟ, ಹಾಕತ್ತೂರು ತ್ರಿನೇತ್ರ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ಕಾರ್ಪೋರೇಶನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ನೆರೆಹೊರೆ ಯುವ ಜನ ಸಂಪತ್ತು ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಆಯುರ್ವೇದವು ಸಾಮಾನ್ಯ ಖಾಯಿಲೆಗೆ ಮನೆ ಮದ್ದು ಆಗಿದೆ. ಆಯುರ್ವೇದ ಔಷಧಿ ಬಹಳ ಮುಖ್ಯವಾಗಿದೆ ಎಂದರು. ನೆಹರು ಯುವ ಕೇಂದ್ರದ ಸಹಾಯಕರಾದ ಫ್ರಾನ್ಸಿಸ್ ಮಾತನಾಡಿ, ಮನೆಯಲ್ಲೇ ಗಿಡಮೂಲಿಕೆಗಳಿಂದ ಔಷಧಿಯನ್ನು ಮಾಡಿಕೊಳ್ಳಬಹುದು ಎಂದು ತಿಳಿಸಿದರು. ಕಾರ್ಪೋರೇಶನ್ ಬ್ಯಾಂಕ್ ನಿರ್ದೇಶಕ ಡಾ. ಜಿ. ಸುರೇಶ್, ಸಹಾಯಕ ಲೆಕ್ಕಾಧಿಕಾರಿ ಬಿ.ವಿ. ಮಹೇಶ್ ಇತರರು ಇದ್ದರು.