ಮಡಿಕೇರಿ, ಡಿ. 5: ‘ಸಹಕಾರಿ ವ್ಯವಸ್ಥೆ ಒಂದು ಆದರ್ಶ ಜೀವನ ವಿಧಾನ’ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ ತಾ. 8 ರಂದು ಪೂರ್ವಾಹ್ನ 11 ರಿಂದ 12 ಗಂಟೆಯವರೆಗೆ ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ಸಭಾಂಗಣದಲ್ಲಿ ನಡೆಯಲಿದೆ. ವಿದ್ಯಾಸಂಸ್ಥೆಯಿಂದ ಒಬ್ಬ ವಿದ್ಯಾರ್ಥಿಯನ್ನು ಆಯ್ಕೆಮಾಡಿ ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ಕೊಡಗು ಜಿಲ್ಲಾ ಸಹಕಾರ ಯೂನಿಯನ್ಗೆ ಕಳುಹಿಸಿಕೊಡುವಂತೆ ಹಾಗೂ ವಿದ್ಯಾರ್ಥಿಗೆ ಪ್ರಯಾಣ ವೆಚ್ಚವನ್ನು ನೀಡಲಾಗುವದು. ಆಂಗ್ಲ ಅಥವಾ ಕನ್ನಡ ಭಾಷೆಯಲ್ಲಿ ಮಾತ್ರ ಬರೆಯಲು ಅವಕಾಶವಿದೆ. ಪ್ರಬಂಧ ಬರೆಯಲು ಬೇಕಾಗುವ ಉತ್ತರ ಪತ್ರಿಕೆಯನ್ನು ಆ ದಿವಸ ಸ್ಪರ್ಧಾ ಭವನದಲ್ಲಿ ಕೊಡಲಾಗುವದು. ಪ್ರಬಂಧವನ್ನು ನಾಲ್ಕು ಪುಟಗಳಿಗೆ ಕಡಿಮೆ ಇಲ್ಲದಂತೆ ಆರು ಪುಟಗಳಿಗೆ ಮೀರದಂತೆ ಬರೆಯಬೇಕು ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.