ಸೋಮವಾರಪೇಟೆ, ಡಿ. 5: ಮನೆಯವರನ್ನು ತೊರೆದು ಕಳೆದ 20 ದಿನಗಳಿಂದ ಪಟ್ಟಣದಲ್ಲಿ ಸುತ್ತುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯ ಸಹಾಯಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮುಂದಾಗಿದ್ದು, ಮಹಿಳೆಯನ್ನು ಮಡಿಕೇರಿಯಲ್ಲಿರುವ ನಿರ್ಗತಿಕರ ಸೇವಾ ಸಂಸ್ಥೆಗೆ ಸೇರಿಸಿದ್ದಾರೆ.ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ಮೋರಿಕಲ್ಲು ಗ್ರಾಮದ ಲೀಲಾವತಿ ಪಟ್ಟಣದಲ್ಲೇ ಅಲೆಯುತ್ತಿದ್ದರು. ಪರಿಸ್ಥಿತಿಯನ್ನು ಕಂಡ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್, ನಗರಾಧ್ಯಕ್ಷ ಮಂಜುನಾಥ್ ಮತ್ತು ಪದಾಧಿಕಾರಿಗಳು, ಲೀಲಾವತಿ ಅವರನ್ನು ತಮ್ಮದೇ ವಾಹನದಲ್ಲಿ ಮಡಿಕೇರಿಯ ನಿರ್ಗತಿಕರ ಸೇವಾ ಸಂಸ್ಥೆ ತನಲ್‍ಗೆ ಕರೆದೊಯ್ದು ಆಶ್ರಯ ನೀಡಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಸಂತೋಷ್, ಬೇಟು, ಬಜೆಗುಂಡಿ ಅಬ್ಬಾಸ್, ಸಾಹಿತ್ಯ ಘಟಕದ ಅಧ್ಯಕ್ಷ ಕೆ.ಪಿ. ಸುದರ್ಶನ್, ಗೃಹ ರಕ್ಷಕ ದಳದ ಸಿಬ್ಬಂದಿಗಳಾದ ತಾರಾ, ಮಂಜುಳಾ ಅವರುಗಳು ಸೇವಾ ಸಂಸ್ಥೆಗೆ ತೆರಳಿ ನಿರ್ಗತಿಕ ಮಹಿಳೆಗೆ ಆಶ್ರಯ ಕೊಡಿಸಿದರು.