ಸುಂಟಿಕೊಪ್ಪ, ಡಿ. 4: ಇಲ್ಲಿನ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣ ದಲ್ಲಿ ಮಕ್ಕಳ ದಿನಾಚರ ಣೆಯ ಅಂಗವಾಗಿ ಶಾಲೆಯ ಶಿಕ್ಷಕ-ಶಿಕ್ಷಕಿಯರು ಬಾಲ್ಯದ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವ ಸಂಗೀತ, ನೃತ್ಯ, ಗಾಯನಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಕಲಾ ಪ್ರತಿಭೆಗೆ ಪ್ರೋತ್ಸಾಹ ನೀಡಿದರು. ಸಮಾರಂಭದ ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳೇ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನಾಯಕತ್ವ ವಹಿಸಿದ್ದರು. ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ವ್ಯವಸ್ಥಾಪಕ ಫಾದರ್ ಎಡ್ವರ್ಡ್ ವಿಲಿಯಂ ಸಾಲ್ಡಾನ ಸಮಾರಂಭವನ್ನು ವಿದ್ಯಾರ್ಥಿಗಳೊಂದಿಗೆ ಉದ್ಘಾಟಿಸಿದರು.
ಸಮಾರಂಭದ ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ನಾಯಕ ರಕ್ಷಿತ್, ಸೌಜನ್ಯ, ಅಪ್ಸನ, ಗ್ಲೇನ್, ಅನಿತೀರ್ಪ, ರಹೆನಾ, ಫಮಾಮಿದಾ, ತರುಣ್, ಬಿಂದಿಯ, ಶಮೀವುದ್ದೀನ್, ವಿರೋಧ ಪಕ್ಷ ನಾಯಕಿ ಸ್ನೇಹ ಇದ್ದರು.