ಕುಶಾಲನಗರ, ಡಿ. 5: ಕೊಡಗು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯ ಸುಧಾರಿಸುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸರಕಾರ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕಲ್ಪಿಸಿದೆ. ಜಿಲ್ಲೆಯ ಪೊಲೀಸ್ ಅಧಿಕಾರಿಗಳು ರಕ್ಷಣೆಗಾಗಿ ಪಿಸ್ತೂಲ್ ಹೊಂದಿದ್ದು ಇದೀಗ ವೀಡಿಯೋ ಕ್ಯಾಮರಾ ಮತ್ತು ರೆಕಾರ್ಡಿಂಗ್ ವ್ಯವಸ್ಥೆ ಹೊಂದಿರುವ ಪುಟ್ಟ ಕ್ಯಾಮರಾ ಒಂದನ್ನು ತಮ್ಮ ಸಮವಸ್ತ್ರದಲ್ಲಿ ಅಳವಡಿಸಿಕೊಂಡಿರುವ ದೃಶ್ಯ ಗೋಚರಿ ಸುತ್ತಿದೆ. ದಿನದ 24 ಗಂಟೆ ಕಾರ್ಯಾ ಚರಣೆ ಸಂದರ್ಭ ಈ ಕ್ಯಾಮೆರಾ ಕಾರ್ಯಾಚರಣೆ ನಡೆಸುತ್ತಿದ್ದು ಅಧಿಕಾರಿಗಳು ಸಂಶಯಾಸ್ಪದ ದೃಶ್ಯಗಳ ಹಾಗೂ ಮಾಹಿತಿ ಕಲೆಹಾಕುವ ವ್ಯವಸ್ಥೆಗೆ ಇದು ಸಹಕಾರಿಯಾದಂತಿದೆ. ಯಾವದೇ ಪ್ರಕರಣದ ಬಗ್ಗೆ ಚರ್ಚೆ ಸಂದರ್ಭ ಈ ವೀಡಿಯೋ ಕ್ಯಾಮರಾ ಎಲ್ಲಾ ಅಂಶಗಳನ್ನು ದಾಖಲಿಸುತ್ತದೆ. ನಂತರ ಎಲ್ಲಾ ವಿವರಗಳನ್ನು ಕಂಪ್ಯೂಟರ್ಗೆ ರವಾನಿಸುವ ವ್ಯವಸ್ಥೆ ಈ ಕ್ಯಾಮರಾಗಳು ಹೊಂದಿವೆ.