ನಾಪೆÇೀಕ್ಲು, ಡಿ. 5: 2018ನೇ ಇಸವಿಯಲ್ಲಿ ನಾಪೆÇೀಕ್ಲು ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವದ ಸಾರಥ್ಯವನ್ನು ನಾಪೆÇೀಕ್ಲು ಕುಲ್ಲೇಟಿರ ಕುಟುಂಬ ವಹಿಸಿಕೊಂಡಿದೆ. ಈ ಹಾಕಿ ಹಬ್ಬದ ಯಶಸ್ವಿಗೆ ನಾಪೆÇೀಕ್ಲು ಬೊಪ್ಪಂಡ ಕುಟುಂಬಸ್ಥರು 50 ಸಾವಿರ ರೂ.ಗಳ ಚೆಕ್ಕನ್ನು ಕುಲ್ಲೇಟಿರ ಹಾಕಿ ನಮ್ಮೆ ಸಮಿತಿ ಅಧ್ಯಕ್ಷ ಕುಲ್ಲೇಟಿರ ಮಂದಪ್ಪ ಅವರಿಗೆ ಹಸ್ತಾಂತರಿಸಿದರು.
ಕುಲ್ಲೇಟಿರ ಐನ್ ಮನೆಯಲ್ಲಿ ಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ಚೆಕ್ ನೀಡಿ ಮಾತನಾಡಿದ ನಿವೃತ್ತ ಡಿವೈಎಸ್ಪಿ ಬೊಪ್ಪಂಡ ಕುಶಾಲಪ್ಪ ನಮ್ಮ ಗ್ರಾಮದ ಕುಲ್ಲೇಟಿರ ಕುಟುಂಬ ಈ ಬಾರಿಯ ಹಾಕಿ ನಮ್ಮೆಯ ಉಸ್ತುವಾರಿ ವಹಿಸಿರುವದು ಹೆಮ್ಮೆಯೆನಿಸಿದೆ. ಹಾಕಿ ನಮ್ಮೆಯ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.
ಹಾಕಿ ನಮ್ಮೆ ಸಮಿತಿ ಅಧ್ಯಕ್ಷ ಕುಲ್ಲೇಟಿರ ಮಂದಪ್ಪ ಮಾತನಾಡಿ ನಮ್ಮ ಕುಟುಂಬಸ್ಥರಿಂದ ಮಾತ್ರ ಹಾಕಿ ನಮ್ಮೆ ನಡೆಸಲು ಸಾಧ್ಯವಿಲ್ಲ. ಎಲ್ಲರೂ ತನು, ಮನ, ಧನದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಅರೆಯಡ ಡಿ.ಸೋಮಪ್ಪ, ಕೊಂಬಂಡ ಗಣೇಶ್, ಕುಲ್ಲೇಟಿರ ಮುತ್ತಪ್ಪ, ಗುರುವಪ್ಪ, ಅಜಿತ್ ನಾಣಯ್ಯ ಮಾತನಾಡಿದರು.