ಗೋಣಿಕೊಪ್ಪ ವರದಿ, ಡಿ. 2: ಮಂಡೇಪಂಡ ಸುಬ್ರಮಣಿ ಜ್ಞಾಪಕಾರ್ಥ ಹಾಕಿ ಟೂರ್ನಿಯಲ್ಲಿ ಬಾಲಕರ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್, ಬಾಲಕಿಯರ ಟಿ. ಶೆಟ್ಟಿಗೇರಿ ರೂಟ್ರ್ಸ್ ತಂಡಗಳು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿವೆ.
ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆದ 14 ವರ್ಷದೊಳಗಿನ ಬಾಲಕ, ಬಾಲಕಿಯರ ಫೈನಲ್‍ನಲ್ಲಿ ಸೋಲನುಭವಿಸಿದ ಬಾಲಕರ ಗೋಣಿಕೊಪ್ಪ ಲಯನ್ಸ್, ಬಾಲಕಿಯರ ಮಡಿಕೇರಿ ಸ್ಪೋಟ್ರ್ಸ್ ಹಾಸ್ಟೆಲ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಮೊದಲ ಸೆಮಿ ಫೈನಲ್‍ನಲ್ಲಿ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡವು ವೀರಾಜಪೇಟೆ ಸೆಂಟ್ ಆನ್ಸ್ ವಿರುದ್ಧ 3-0 ಗೋಲುಗಳಿಂದ ಜಯಿಸಿತು. ಪೊನ್ನಂಪೇಟೆ ಪರ 11 ನೇ ನಿಮಿಷದಲ್ಲಿ ಮೌರ್ಯ ತಿಮ್ಮಯ್ಯ, 29 ನೇ ನಿಮಿಷದಲ್ಲಿ ದೃವಿನ್, 33 ನೇ ನಿಮಿಷದಲ್ಲಿ ರಿಶಿಕ್ ನಾಚಪ್ಪ ಗೋಲು ಹೊಡೆದರು. ಮೊದಲ ಸೆಮಿ ಫೈನಲ್‍ನಲ್ಲಿ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡವು ವೀರಾಜಪೇಟೆ ಸೆಂಟ್ ಆನ್ಸ್ ವಿರುದ್ಧ 3-0 ಗೋಲುಗಳಿಂದ ಜಯಿಸಿತು. 2ನೇ ಸೆಮಿಯಲ್ಲಿ ಗೋಣಿಕೊಪ್ಪ ಲಯನ್ಸ್ ತಂಡವು ಪೊನ್ನಂಪೇಟೆ ಸಂತ ಆಂಥೋನಿ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಜಯಿಸಿತು.
ಬಾಲಕಿಯರ ಮೊದಲ ಸೆಮಿ ಫೈನಲ್‍ನಲ್ಲಿ ಮಡಿಕೇರಿ ಸ್ಪೋಟ್ರ್ಸ್ ಹಾಸ್ಟೆಲ್ ತಂಡವು ರೂಟ್ರ್ಸ್ (ಬಿ) ತಂಡವನ್ನು 5-0 ಗೋಲುಗಳ ಅಂತರದಿಂದ ಮಣಿಸಿತು. 2ನೇ ಸೆಮಿಯಲ್ಲಿ ರೂಟ್ರ್ಸ್ ತಂಡವು ಗೋಣಿಕೊಪ್ಪ ಲಯನ್ಸ್ ವಿರುದ್ಧ ಶೂಟೌಟ್‍ನಲ್ಲಿ 4-2 ಗೋಲುಗಳಿಂದ ಜಯಿಸಿತು.
ಟೂರ್ನಿ ನಿರ್ದೇಶಕರಾಗಿ ಬುಟ್ಟಿಯಂಡ ಚೆಂಗಪ್ಪ, ತಾಂತ್ರಿಕ ವರ್ಗದಲ್ಲಿ ಮುಂಡ್ಯೋಳಂಡ ದರ್ಶನ್, ಮೇರಿಯಂಡ ಅಯ್ಯಣ್ಣ, ಮೇರಿಯಂಡ ಮುತ್ತಪ್ಪ, ಚೋಯಮಾಡಂಡ ಬಿಪಿನ್, ಅರುಣ್, ಹರಿಣಾಕ್ಷಿ ಕಾರ್ಯನಿರ್ವಹಿಸಿದರು.
ಸಮಾರೋಪದಲ್ಲಿ ದಾನಿಗಳಾದ ಮಂಡೇಪಂಡ ಪಾರ್ವತಿ, ಚಂದಪಂಡ ವಿಜಯಲಕ್ಷ್ಮಿ, ಹಾಕಿಕೂರ್ಗ್ ಕಾರ್ಯದರ್ಶಿ ಪಳಂಗಂಡ ಲವಕುಮಾರ್, ಖಜಾಂಜಿ ಲಾಲಾ ಅಯ್ಯಣ್ಣ, ಸದಸ್ಯ ತೀತೀರ ಸೋಮಣ್ಣ ಬಹುಮಾನ ವಿತರಿಸಿದರು.