ಮಡಿಕೇರಿ, ಡಿ. 2: ಕೊಡಗು ಜಿಲ್ಲೆಯಲ್ಲಿ ಗ್ರಾಮೀಣ ರಸ್ತೆಗಳು ರಾಜ್ಯ ಹೆದ್ದಾರಿ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಾಗಿದ್ದು, ಈ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಿಗೆ ಇರುವದರಿಂದ ಪ್ರಮುಖ ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಒಟ್ಟು ರೂ. 53 ಕೋಟಿ ಮೊತ್ತದ ರಸ್ತೆ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉಸ್ತುವಾರಿ ಸಚಿವರ ಆಪ್ತರಾದ ಕದ್ದಣಿಯಂಡ ಬೋಪಣ್ಣ ತಿಳಿಸಿದ್ದಾರೆ.
ವೀರಾಜಪೇಟೆ ತಾಲೂಕಿನ ಕಾಕೂರು- ಪೊಮ್ಮಾಡು- ಬೊಳ್ಳಾರಿಗೇಟ್- ಆಲಂದೋಡು ರಸ್ತೆಗೆ ರೂ. 5 ಕೋಟಿ, ಹೈಸೊಡ್ಲೂರು ಅಂಬಲದಿಂದ ಕತ್ತಮಕೇರಿ ರಸ್ತೆಗೆ 3.5 ಕೋಟಿ, ಹುದಿಕೇರಿ- ಕೊಳತ್ತೂರು- ಮುಕ್ಕಾಟಿಮಾನಿ- ಹೈಸೊಡ್ಲೂರು ರಸ್ತೆಗೆ 3 ಕೋಟಿ, ನಾಲ್ಕೇರಿ ಶ್ರೀಮಂಗಲ ರಸ್ತೆಗೆ ರೂ. 3.5 ಕೋಟಿ, ಬಾಳಾಜಿ- ಚೆನ್ನಂಗೊಲ್ಲಿಯಿಂದ ಕೋಣನಕಟ್ಟೆ- ಬಾಳೆಲೆ ಸಂಪರ್ಕ ರಸ್ತೆಗೆ ರೂ. 3.5 ಕೋಟಿ, ಕರಡ ಲಿಂಕ್ ರಸ್ತೆಯಿಂದ ಪಾಲೆಕಂಡ ಅಯ್ಯಣ್ಣನವರ ಲೈನ್‍ಮನೆ ಪಕ್ಕದಿಂದ ಕೊಟ್ಟಚ್ಚಿ- ಮೈಕ್ರೋಸ್ಟೇಶನ್ ರಸ್ತೆಗೆ ರೂ. 3.5 ಕೋಟಿ, ಕೆದಮುಳ್ಳೂರು- ಬಾರಿಕಾಡು- ತರಗನ್ ತೋಟದಿಂದ ಗುಂಡಿಕೆರೆ ಹರಿಜನ ಕಾಲೋನಿಗೆ ಹೋಗುವ ರಸ್ತೆಗೆ ರೂ. 4 ಕೋಟಿ, ಹೈಸೊಡ್ಲೂರು ಕಾಪರ - ಅಂಗನವಾಡಿ- ಮಹದೇವರ ದೇವಸ್ಥಾನ- ಕುಟ್ಟ ಮುಖ್ಯರಸ್ತೆಯ ಸಂಪರ್ಕ ರಸ್ತೆಗೆ ರೂ. 3 ಕೋಟಿ, ಕೆದಮುಳ್ಳೂರು ಜಂಕ್ಷನ್‍ನಿಂದ ಕಡಂಗ ಜಂಕ್ಷನ್‍ವರೆಗೆ ರೂ. 2.5 ಕೋಟಿ, ಮಡಿಕೇರಿ ತಾಲೂಕಿನ ಬಾವಲಿ- ಚಿಟ್ಟಡೆ- ಕೋಕೇರಿ- ಕೊಳಕೇರಿ ರಸ್ತೆಗೆ ರೂ. 6 ಕೋಟಿ, ಬೇಂಗೂರು ಗ್ರಾಮದ ಕಾರುಗುಂದ ಬಸ್ ತಂಗುದಾಣದಿಂದ ಚೇರಂಬಾಣೆ ಸಂಪರ್ಕ ರಸ್ತೆಗೆ ರೂ. 3.5 ಕೋಟಿ, ಮೈಸೂರು - ಬಂಟ್ವಾಳ ಮುಖ್ಯ ರಸ್ತೆಯಿಂದ ಅವಂದೂರು - ಹೆರವನಾಡು- ಕೊಳಗದಾಳು ಮೂಲಕ ಚೇರಂಬಾಣೆ ಸಂಪರ್ಕ ರಸ್ತೆಗೆ ರೂ. 8 ಕೋಟಿ, ಚೆಯ್ಯಂಡಾಣೆ- ಬಾವಲಿ ರಸ್ತೆಗೆ ರೂ. 4 ಕೋಟಿ ಮೊತ್ತದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಲಭಿಸುವ ಭರವಸೆಯಿರುವದಾಗಿ ಹರೀಶ್ ತಿಳಿಸಿದ್ದಾರೆ.