ಮಡಿಕೇರಿ, ಡಿ. 2: ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯಲು ದೆಹಲಿಯಲ್ಲಿ ಇತ್ತೀಚೆಗೆ ಸಮಾವೇಶ ನಡೆಯಿತು.

ಕನಿಷ್ಟ ವೇತನ ರೂ. 18 ಸಾವಿರ ನೀಡಬೇಕು ಹಾಗೂ ನಿವೃತ್ತರಾದವರಿಗೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು ಎಂದು ಕೊಡಗು ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘ ತಿಳಿಸಿದೆ.

ಸಂಘದ ಜಿಲ್ಲಾಧ್ಯಕ್ಷೆ ಎ.ಜಿ. ತಾರಾಮಣಿ, ಮಡಿಕೇರಿ ತಾಲೂಕು ಅಧ್ಯಕ್ಷೆ ವಿ.ಹೆಚ್. ನಾಗರತ್ನ, ಕಾರ್ಯದರ್ಶಿ ಸಿ.ಯು. ಪವಿತ್ರ, ಸುಜಾತ, ಖಜಾಂಚಿ ಗೀತಾ ಹಾಗೂ ಸೋಮವಾರಪೇಟೆ ತಾಲೂಕಿನ ಪದಾಧಿಕಾರಿಗಳಾದ ಕೆ.ಕೆ. ಶಾರದ, ಚಂದ್ರಲೇಖ, ಮೋಹನಾಕ್ಷಿ ಮತ್ತಿತರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಬಜೆಟ್‍ನಲ್ಲಿ ರೂ. 14 ಸಾವಿರ ವೇತನ ನಿಗದಿಪಡಿಸುವ ಕುರಿತು ಭರವಸೆ ದೊರೆತಿದೆ ಎಂದು ತಾಲೂಕು ಅಧ್ಯಕ್ಷೆ ವಿ.ಹೆಚ್. ನಾಗರತ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.