ಶನಿವಾರಸಂತೆ, ಡಿ. 2: ಶನಿವಾರಸಂತೆ ಸಮೀಪದ ಗಂಗಾವರ ಗ್ರಾಮದ ಕೂಲಿಕಾರ್ಮಿಕನೋರ್ವ ತನ್ನ 10 ವರ್ಷದ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಗಂಗಾವರ ಗ್ರಾಮದ ಕೃಷ್ಣ ಎಂಬಾತ ತನ್ನ ಹೆಂಡತಿ ಮಲ್ಲಿಗೆಯೊಂದಿಗೆ ಕೂಲಿ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದು, ತನ್ನ 10 ವರ್ಷದ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ರಕ್ತ ಸ್ರಾವವಾಗಿದ್ದ ಪುತ್ರಿಯನ್ನು ತಾಯಿ ಮಲ್ಲಿಗೆ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಾಧಿಕಾರಿ ಸಿಗದ್ದರಿಂದ ವಾಪಾಸು ಮನೆಗೆ ಬಂದಾಗ ಗಂಡ ಕೃಷ್ಣನಿಗೆ ವಿಚಾರ ಗೊತ್ತಾಗಿ ಪುತ್ರಿಯನ್ನು ಆಸ್ಪತ್ರೆಗೆ ಏಕೆ ಕರೆದುಕೊಂಡು ಹೋದೆ ಎಂದು ಕೇಳಿ ಪತ್ನಿಗೆ ಹಲ್ಲೆ ಮಾಡಿ, ಗಾಯಪಡಿಸಿರುವದಲ್ಲದೆ, ತಾಯಿ ಮಗಳೊಂದಿಗೆ ಮಾತನಾಡುತ್ತಿರುವಾಗ ಮತ್ತೆ ಜಗಳ ತೆಗೆದು ಸೌದೆಕೊಳ್ಳಿಯಿಂದ ಪತ್ನಿಯ ಎಡಕೈ ಭಾಗಕ್ಕೆ ಸುಟ್ಟು ಗಾಯಗೊಳಿಸಿದ್ದು, ಈ ಬಗ್ಗೆ ಪತ್ನಿ ಮಲ್ಲಿಗೆ ನ. 27ರಂದು ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಶನಿವಾರಸಂತೆ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.