ಕೂಡಿಗೆ, ಡಿ. 2: ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ರಸ್ತೆ ಮತ್ತು ಇತರ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಕೂಡಿಗೆ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಭೂಮಿಪೂಜೆಯನ್ನು ನೆರವೇರಿಸಿ, ಮಾತನಾಡಿ, ಗ್ರಾಮಾಂತರ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿಯ ಅನುದಾನವನ್ನು ಸದ್ಬಳಸಿಕೊಂಡು ರಸ್ತೆ, ಚರಂಡಿ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಅದರಂತೆ ಜಿ.ಪಂ. ಸುಮಾರು ರೂ. 6.5 ಲಕ್ಷ ಅನುದಾನದಲ್ಲಿ ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯ ಗುಮ್ಮನಕೊಲ್ಲಿ, ನಾಗಮ್ಮನ ಮಂಟಿ ರಸ್ತೆ, ವಾಲ್ಮೀಕಿ ಭವನ, ಗೊಂದಿಬಸವನಹಳ್ಳಿ ರಸ್ತೆ ಹಾಗೂ ಉಪರಸ್ತೆಗಳ ಕಾಮಗಾರಿಗೆ ಇದೀಗ ಭೂಮಿಪೂಜೆ ನಡೆಸಲಾಗಿದೆ ಎಂದರು.
ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ಶಿವಾನಂದ, ವಿಶ್ವ, ಗಣೇಶ್, ಸುರೇಶ್, ರುದ್ರಾಂಬಿಕೆ, ಮಮತಾ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗಣಿಪ್ರಸಾದ್, ಬಿಜೆಪಿ ಕೂಡಿಗೆ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಣಿ, ಗ್ರಾಮಸ್ಥರಾದ ಆರ್. ಜಯಮ್ಮ, ಗಿರೀಶ್, ಚಂದ್ರು ಮೊದಲಾದವರು ಇದ್ದರು.