ಭಾಗಮಂಡಲ/ಕರಿಕೆ, ಡಿ. 2: ಇಲ್ಲಿಗೆ ಸಮೀಪದ ತಣ್ಣಿಮಾನಿ ಎಂಬಲ್ಲಿ ಅಕ್ರಮವಾಗಿ ಕಡವೆಯನ್ನು ಗುಂಡಿಕ್ಕಿ ಕೊಂದು ಮಾಂಸ ಮಾಡಿದ ಆರೋಪಿಗಳನ್ನು ಅರಣ್ಯ ಇಲಾಖಾಧಿಕಾರಿಗಳು ಖಚಿತ ಸುಳಿವಿನ ಮೇರೆಗೆ ಮೇಲೆ ಧಾಳಿ ಮಾಡಿ ಪೂರ್ಣೆಶ್ (ಅಪ್ಪಿ) ಹಾಗೂ ಜೆ.ಕೆ. ಸುರೇಶ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 2.800 ಕೆಜಿಯಷ್ಟು ಒಣ ಮಾಂಸ ಹೂತು ಹಾಕಲಾಗಿದ್ದ ಕಡವೆ ತಲೆ, ಒಂದು ಗುದ್ದಲಿ, ಕತ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿಗಳಾದ ಯೋಗಾನಂದ, ಮೋಹನ, ದಾಮೋದರ ಎಂಬವರು ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಬಲೆ ಬೀಸಿದ್ದು, ಭಾಗಮಂಡಲ ವಲಯಾರಣ್ಯಾಧಿಕಾರಿ ಕಚೇರಿಯಲ್ಲಿ ವನ್ಯಜೀವಿ ಕಾಯ್ದೆಯ ಪ್ರಕರಣ ದಾಖಲಾಗಿದೆ. ಭಾಗಮಂಡಲ ಪಶು ವೈದ್ಯಾಧಿಕಾರಿ ಡಾ.ಬೊಳ್ಳಕ್ಕಿ ವೈದ್ಯಕೀಯ ಪರೀಕ್ಷೆ ನಡೆaಸಿದರು. ಮಡಿಕೇರಿ ಉಪಅರಣ್ಯ ಸಂರಕ್ಷಣಾ ಅಧಿಕಾರಿ ಸೂರ್ಯಸೇನ್ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು ನೇತೃತ್ವದಲ್ಲಿ ವಲಯಾರಣ್ಯಾಧಿಕಾರಿ ಎಂ.ಎಸ್.ಚಂಗಪ್ಪ, ಉಪ ವಲಯಾರಣ್ಯಾಧಿಕಾರಿಗಳಾದ ಪಿ.ಟಿ. ಶಶಿ, ಅಮ್ರತೇಶ್ ಬಿ.ಬಿ. ಸುರೇಶ್ ಅರಣ್ಯ ರಕ್ಷಕರಾದ ವಾಗೀಶ, ಸದಾನಂದ ಹಿಪ್ಪರಗಿ, ರವಿ, ಮನು, ವಾಸು ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.