ವೀರಾಜಪೇಟೆ, ನ. 30: ಕಳೆದ 17 ವರ್ಷಗಳಿಂದ ಕರಾವಳಿಯ ಪುತ್ತೂರಿನ ದರ್ಬೆಯಲ್ಲಿ ಆರಂಭ ಗೊಂಡ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು 25 ಸಾವಿರ ಸದಸ್ಯರನ್ನು ಹೊಂದಿದ್ದು ವಾರ್ಷಿಕ ರೂ. 260 ಕೋಟಿ ವ್ಯವಹಾರ ನಡೆಸಿದೆ. ರಾಜ್ಯಾದ್ಯಂತ 17 ಶಾಖೆಗಳನ್ನು ಹೊಂದಿದ್ದು ಕಳೆದ ವರ್ಷ ರೂ. 2.76 ಕೋಟಿ ವಾರ್ಷಿಕ ನಿವ್ವಳ ಲಾಭ ಗಳಿಸಿದೆ ಎಂದು ಪ್ರಧಾನ ವ್ಯವಸ್ಥಾಪಕ ಎ. ವಸಂತ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಸ್ಯರಿಗೆ ಶೇ. 13 ಲಾಭಂಶ ನೀಡಲಾಗುತ್ತಿದೆ. ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಗೃಹಸಾಲ, ವಾಹನಸಾಲ, ಇ-ಸ್ಟಾಂಪಿಂಗ್, ವಿದೇಶಿ ಹಣ ವಿನಿಮಯ ಹಾಗೂ ಲಾಕರ್ ಸೌಲಭ್ಯಗಳೊಂದಿಗೆ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದೆ ಎಂದು ಹೇಳಿದರು. ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಪಿನ್‍ಚಂದ್ರ ಮಾತನಾಡಿ, ಸರಸ್ವತಿ ಸಂಸ್ಥೆಯು ವೀರಾಜಪೇಟೆ ಶಾಖೆ 2 ವರ್ಷಗಳು ಪೂರೈಸಿದ ಹಿನ್ನೆಲೆ ಉಚಿತ ವೈದ್ಯಕೀಯ ತಪಾಸಣಾ ಮತ್ತು ಸಲಹಾ ಶಿಬಿರವನ್ನು ವೀರಾಜಪೇಟೆ ರೋಟರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸಾರ್ವಜನಿಕರು ಇದರ ಉಪಯೋಗ ವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ವೀರಾಜಪೇಟೆ ಶಾಖಾ ವ್ಯವಸ್ಥಾಪಕ ರಾಜೇಶ್ ಮಾತನಾಡಿ, ಅಂದು ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಸ್ವತಿ ಚಾರಿಟೇಬಲ್ ಟ್ರಸ್ಟ್‍ನ ಟ್ರಸ್ಟಿ ನಿವೃತ್ತ ಡಿಸಿಎಫ್ ಪುರುಷೋತ್ತಮ ಪ್ರಭು, ಸುಳ್ಯ ಕೆ.ವಿ.ಜಿ ವೈದ್ಯಕೀಯ ಮಹಾ ವಿದ್ಯಾಲಯದ ಅಧ್ಯಕ್ಷ ಹಾಗೂ ವ್ಯೆದ್ಯಕೀಯ ನಿರ್ದೇಶಕ ಡಾ. ಕೆ.ವಿ. ಚಿದಾನಂದ ಆರೋಗ್ಯ ಶಿಬಿರವನ್ನು ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಡಾ. ನರಸಿಂಹನ್, ವಕೀಲ ನರೇಂದ್ರ ಕಾಮತ್, ರೋಟರಿ ಅಧ್ಯಕ್ಷ ಶಾಂತ ರಾಮ್ ಕಾಮತ್, ಬಿ.ಎಸ್. ರಾಜೇಶ್, ಡಾ. ಹಿತೇಶ್, ಡಾ. ಪ್ರಶಾಂತ್, ಕೃಷ್ಣರಾವ್, ಟಿ. ಪ್ರದೀಪ್ ಉಪಸ್ಥಿತರಿರುವರು ಎಂದರು.