ಮಡಿಕೇರಿ, ನ. 30: 2018 ರ ನವೆಂಬರ್ 2, 3 ಮತ್ತು 4 ರಂದು ಬಾಳುಗೋಡುವಿನಲ್ಲಿ ಕೊಡವ ನಮ್ಮೆಯನ್ನು ಆಚರಿಸಲು ಕೊಡವ ಸಮಾಜಗಳ ಒಕ್ಕೂಟ ನಿರ್ಧರಿಸಿದೆ.
ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ಮಾಸಿಕ ಸಭೆ ಬಾಳುಗೋಡುವಿನಲ್ಲಿ ನಡೆಯಿತು. 2019 ರಲ್ಲಿ ಕೊಡವ ಕುಟುಂಬಗಳ ನಡುವಿನ ಹಾಕಿ ಹಬ್ಬವನ್ನು ಹರಿ ಹರದ ಮುಕ್ಕಾಟಿರ ಕುಟುಂಬಸ್ಥರು ಬಾಳುಗೋಡುವಿನಲ್ಲಿ ನಡೆಸುವ ಕುರಿತು ನಿರ್ಣಯಿಸ ಲಾಯಿತು.
2018 ರ ನವೆಂಬರ್ ತಿಂಗಳಿನಲ್ಲಿ ಕೊಡವ ನಮ್ಮೆಯನ್ನು ಅರ್ಥಪೂರ್ಣವಾಗಿ ಆಚರಿಸುವದಲ್ಲದೆ, ಫೆಬ್ರವರಿ ತಿಂಗಳಿನÀಲ್ಲಿ ಸಮಾಜದ ಆಟದ ಮೈದಾನವನ್ನು ಅಭಿವೃದ್ಧಿ ಪಡಿಸುವ ಕುರಿತು ಚರ್ಚಿಸಲಾಯಿತು. ಮೈದಾನಕ್ಕಾಗಿ ಸಂಸದ ಪ್ರತಾಪ್ ಸಿಂಹ ಅವರಿಂದ ರೂ. 40 ಲಕ್ಷ ಹಾಗೂ ಮೈದಾನಕ್ಕೆ ತೆರಳುವ ರಸ್ತೆಯ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರಿಂದ ರೂ. 20 ಲಕ್ಷ ನಿರೀಕ್ಷೆಯಲ್ಲಿರುವದಾಗಿ ಪ್ರಮುಖರು ಸಭೆಯ ಗಮನ ಸೆಳೆದರು.
ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಕೊಡವ ನಮ್ಮೆಯ ಯಶಸ್ಸಿಗೆ ಸರ್ವರು ಸಹಕರಿಸುವಂತೆ ಮನವಿ ಮಾಡಿದರು. ಖಜಾಂಚಿ ಚಿರಿಯಪಂಡ ಕಾರ್ಯಪ್ಪ, ಜಂಟಿ ಕಾರ್ಯದರ್ಶಿ ಕೋದಂಡ ಸನ್ನು ಕಾವೇರಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.