ಸೋಮವಾರಪೇಟೆ, ನ. 30: ಸಮೀಪದ ಕಲ್ಕಂದೂರು ಗ್ರಾಮದ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ವತಿಯಿಂದ ನಿರ್ಮಿಸಲಾಗಿರುವ ನೂತನ ಮದ್ರಸಾ ಕಟ್ಟಡದ ಉದ್ಘಾಟನೆ ಮತ್ತು ಈದ್‍ಮಿಲಾದ್-ಸ್ನೇಹ ಸಂಗಮ ಕಾರ್ಯಕ್ರಮ ತಾ. 3 ರಂದು ನಡೆಯಲಿದೆ.ಅಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‍ವೈಎಸ್ ಅಧ್ಯಕ್ಷ ಉಮ್ಮರ್ ವಹಿಸಲಿದ್ದು, ಮುಸ್ತಫ ಸಖಾಫಿ ಪ್ರಾರ್ಥನೆ ನೆರವೇರಿಸಲಿದ್ದಾರೆ. ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಸಂದೇಶ ಭಾಷಣ ಮಾಡಲಿದ್ದು, ನೂತನ ಮದ್ರಸವನ್ನು ಕುಂಜಿಲ ತಂಙಳ್ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ಸಚಿವ ಬಿ.ಎ. ಜೀವಿಜಯ, ಐಎನ್‍ಟಿಯುಸಿ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಕಿರಿಕೊಡ್ಲಿ ಸದಾಶಿವ ಸ್ವಾಮೀಜಿ ವಕ್ಫ್ ಬೋರ್ಡ್‍ನ ಸಾದತ್, ಸಂತ ಜೋಸೆಫರ ಕಾಲೇಜು ಪ್ರಾಂಶುಪಾಲ ಟೆನ್ನಿ ಕುರಿಯನ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.