ಮಡಿಕೇರಿ, ನ. 29: ನೆಹರು ಯುವ ಕೇಂದ್ರ ಮಡಿಕೇರಿ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಹಾಗೂ ಶ್ರೀ ಬೊಟ್ಲಪ್ಪ ಯುವ ಸಂಘ ಇದರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಯುವ ಸಂಘದ ಕಟ್ಟಡದಲ್ಲಿ ಕೌಶಲ್ಯಭಿವೃದ್ಧಿ ಹೊಲಿಗೆ ತರಬೇತಿ ಕೇಂದ್ರವನ್ನು ಯುವ ಸಂಘದ ಸ್ಥಾಪನ ಅಧ್ಯಕ್ಷ ಬಿ.ಎಸ್. ಜಯಪ್ಪ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಯುವ ಸಂಘದ ಅಧ್ಯಕ್ಷ ಸಿ.ಕೆ. ಮಂಜು ವಹಿಸಿದ್ದರು. ಅತಿಥಿಗಳಾಗಿ ಪಿ.ಎಂ. ಸುರೇಶ್ ಹಾಗೂ ದೀಪ ಉದಯಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತರಬೇತಿದಾರರು ಹಾಗೂ ಯುವ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು. ಬಿ.ಎಂ. ದೇವಾನಂದ ನಿರೂಪಿಸಿ, ಸಿ.ಎಂ. ರಾಕೇಶ್ ಸ್ವಾಗತಿಸಿ, ಸಿ.ಎಂ. ನಿಕೇಶ್ ವಂದಿಸಿದರು.