ಮಡಿಕೇರಿ, ನ. 29: ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ತಾಲೂಕು ತಹಶೀಲ್ದಾರರ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಾಕಿ ಇರುವ ಕಡತಗಳು, ಸ್ಮಶಾನ ಭೂಮಿ, ಆರ್.ಟಿ.ಸಿ. ವಿತರಣೆ, ಕಾಲಮಿತಿಯೊಳಗೆ ವಿಲೇವಾರಿ, ಮತ್ತಿತರ ಬಗ್ಗೆ ಪರಿಶೀಲನೆ ಮಾಡಿದರು. ತಹಶೀಲ್ದಾರ್ ಕುಸುಮ, ಶಿರಸ್ತೆದಾರರಾದ ಅರುಣ್ ಸಾಗರ್, ಮಹೇಶ್ ಇತರರು ಇದ್ದರು.