ಕೂಡಿಗೆ, ನ. 29: ಪೆÇಲೀಸ್ ಠಾಣೆಗೆ ದೂರು ನೀಡಲು ಬರುವ ದೂರುದಾರರನ್ನು ಸಂತ್ರಸ್ತ ಮನೋಭಾವದಿಂದ ಕಾಣುವದರ ಜೊತೆಗೆ ಸಾವಧಾನದಿಂದ ಅವರ ಸಮಸ್ಯೆಗಳನ್ನು ಆಲಿಸಿದಾಗ ಮಾತ್ರ ಅವರುಗಳ ಮತ್ತು ನಮ್ಮಗಳ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯ ಎಂದು ಸೋಮವಾರಪೇಟೆ ಡಿವೈಎಸ್ಪಿ ಮುರುಳಿಧರ್ ಹೇಳಿದರು.

ಕೂಡಿಗೆ ಡಯಟ್‍ನಲ್ಲಿ ಏರ್ಪಡಿಸಲಾಗಿದ್ದ ಜನಸ್ನೇಹಿ ಪೆÇಲೀಸ್ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಪೆÇಲೀಸ್ ಠಾಣೆಗೆ ದೂರು ನೀಡಲು ಬರುವ ದೂರುದಾರರು ಅನ್ಯಾಯಕ್ಕೊಳಗಾಗಿ ನೊಂದಂತ ವರಾಗಿ ಬರುತ್ತಾರೆ. ಅಂತವರನ್ನು ಸಮಾಧಾನಪಡಿಸಿ ಪೆÇಲೀಸರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ವೈಯಕ್ತಿಕ ಚಿಂತನೆಗಳನ್ನು ಬದಿಗಿರಿಸಿ ಬಂದಂತಹ ಸಂತ್ರಸ್ತರ ಸಮಸ್ಯೆ ಗಳನ್ನು ಸಮಾಧಾನದಿಂದ ಆಲಿಸಿ ಅವರಿಗೆ ನ್ಯಾಯ ಕೊಡಿಸುವಲ್ಲಿ ಮುಂದಾದದ್ದೇ ಆದಲ್ಲಿ ಪೆÇಲೀಸರು ಹಾಗೂ ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯವಾಗುತ್ತದೆ ಎಂದರು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಾರ್ವಜನಿಕರು ಪೆÇಲೀಸರಿಗೆ ನೆರವಾಗಬೇಕು ಪೆÇಲೀಸರು ಕೂಡ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯತನದಿಂದ ಬೆರೆಯಬೇಕು ಹಾಗಿದ್ದಲ್ಲಿ ಮಾತ್ರ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕರು ನೆಮ್ಮದಿಯ ಜೀವನ ಸಾಗಿಸಲು ಅನುಕೂಲಕರ ವಾಗುವ ವಾತಾವರಣ ನಿರ್ಮಾಣ ವಾಗುತ್ತದೆ ಎಂದರು.

ಕಾರ್ಯಾಗಾರದ ಬಗ್ಗೆ ಇಲಾಖೆಯ ಸಿಬ್ಬಂದಿಗಳು ತಮ್ಮ ಅಭಿಪ್ರಾಯಗಳನ್ನು ಮತ್ತು ಎರಡು ದಿನಗಳ ಅನುಭವಗಳನ್ನು ಮಂಡಿಸಿದರು.

ಈ ಸಂದರ್ಭ ವೃತ್ತ ನಿರೀಕ್ಷಕ ಖ್ಯಾತ ಗೌಡ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಜೆ.ಇ. ಮಹೇಶ್ ಸೋಮವಾರಪೇಟೆ ಠಾಣಾಧಿಕಾರಿ ಶಿವಣ್ಣ ಶನಿವಾರಸಂತೆ ಠಾಣಾಧಿಕಾರಿ ಮರಿಸ್ವಾಮಿ ಸುಂಟಿಕೊಪ್ಪ ಠಾಣಾಧಿಕಾರಿ ಎಸ್. ಎನ್. ಜಯರಾಮ್ ಸೇರಿದಂತೆ ಎಲ್ಲಾ ಠಾಣೆಗಳ ಸಹಾಯಕ ಠಾಣಾಧಿಕಾರಿಗಳು ಹಾಗೂ ಪೆÇಲೀಸ್ ಸಿಬ್ಬಂದಿಗಳು ಇದ್ದರು.