ಚೆಟ್ಟಳ್ಳಿ, ನ. 29: ಚಿಕ್ಕಮಂಗಳೂರಿನಲ್ಲಿ ನಡೆದ ಕಾಫಿಡೇ ಇಂಡಿಯನ್ ರ್ಯಾಲಿ-2017ರಲ್ಲಿ ಕೊಡಗಿನ ಕೊಂಗಂಡ ಗಗನ್ ಕರುಂಬಯ್ಯ ಹಾಗೂ ಕೇಟೋಳಿರ ಅಮೃತ್ ತಿಮಯ್ಯ ಪ್ರಥಮ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ತಾ. 24 ರಿಂದ 26ರ ವರೆಗೆ ಚಿಕ್ಕಮಂಗಳೂರಿನಲ್ಲಿ ನಡೆದ ಜಿಪ್ಸಿ ಕ್ಲಾಸ್ ರ್ಯಾಲಿಯಲ್ಲಿ ಡ್ರೈವರಾಗಿ ಅಮ್ಮತಿಯ ಕೊಂಗಂಡ ಗಗನ್ ಕರುಂಬಯ್ಯ ಹಾಗೂ ನಾವಿಗೇಟ್ ಯುವಕಪಾಡಿಯ ಕೇಟೋಳಿರ ಅಮೃತ್ ತಿಮ್ಮಯ್ಯ ಉತ್ತಮ ಪ್ರದರ್ಶನ ನೀಡಿ ಮೊದಲ ಬಹುಮಾನವನ್ನು ಪಡೆದರು. ಸೋಮವಾರಪೇಟೆಯ ಸಚಿನ್ ಮೂರ್ತಿ (ಡ್ರೈವರ್) ಎರಡನೆ ಬಹಮಾನವನ್ನು ಪಡೆದಿದ್ದಾರೆ. ಮೂವರು ಮೊದಲ ಬಾರಿಗೆ ರ್ಯಾಲಿಯಲ್ಲಿ ಪ್ರತಿನಿಧಿಸಿದ್ದರೆ, ಕೊಂಗಂಡ ಗಗನ್ ಕರುಂಬಯ್ಯ ಕಳೆದ ನಾಲ್ಕು ವರ್ಷಗಳಿಂದ ನ್ಯಾವಿಗೇಟರಾಗಿ ಹಲವು ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ.