ಕೂಡಿಗೆ, ನ. 26: ಕೂಡ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಡಗು ಜಿಲ್ಲಾ ವಿದ್ಯಾಕಲಾ ಸಾಗರದ ವತಿಯಿಂದ ಸ್ವಚ್ಛ ಭಾರತ್ ಯೋಜನೆ ಪರಿಸರ ಸ್ವಚ್ಛತೆ ಕುರಿತು ಜನಜಾಗೃತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಪರಿಸರ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ವಿಶೇಷ ಒತ್ತು ನೀಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕು ಎಂದರು. ಗ್ರಾ.ಪಂ. ಕಾರ್ಯದರ್ಶಿ ಮಾದಪ್ಪ ಮಾತನಾಡಿ, ಪ್ರತಿದಿನ ಕಸ ಸಂಗ್ರ ಹಿಸಲು ಮನೆ ಹತ್ತಿರ ಬರುವ ಕಸ ಸಂಗ್ರಹ ವಾಹನಕ್ಕೆ ಒಣ ಕಸ ಹಾಗೂ ಹಸಿ ಕಸವನ್ನು ಬೇರ್ಪಡಿಸಿ ಹಾಕುವದರ ಮೂಲಕ ನಿವಾಸಿ ಗಳು ಸಹಕರಿಸಬೇಕು ಎಂದರು. ಈ ಸಂದರ್ಭ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಿ.ಆರ್. ರುಕ್ಮಿಣಿ, ಶಿಕ್ಷಕರಾದ ಡಿ.ವಿ. ಗಣೇಶ್, ಬೋಜಮ್ಮ, ಉಷಾ, ಅಂಗನವಾಡಿ ಕಾರ್ಯಕರ್ತೆ ಸುಮಾ, ತ್ರಿಪುರ ಸುಂದರಿ, ವಿದ್ಯಾಸಾಗರ್ ಕಲಾ ವೇದಿಕೆಯ ಕಲಾವಿದ ಈ. ರಾಜು, ಸಹ ಕಲಾವಿದರಾದ ಚಂದ್ರಪ್ಪ, ಗೌರಮ್ಮ, ಲೀಲಾ, ರವಿ, ಬಸವರಾಜು, ಶಿವ, ಪಂಚಾಯಿತಿ ಸಿಬ್ಬಂದಿಗಳಾದ ಅವಿನಾಶ್, ದುಶ್ಯಂತ್ ಇದ್ದರು.