ನಾಪೆÇೀಕ್ಲು, ನ. 22: ತಾ. 26 ರಂದು ಡಾ. ಸುಬ್ರಮಣ್ಯನ್ ಸ್ವಾಮಿ ಅವರ ಸಹಭಾಗಿತ್ವದಲ್ಲಿ ಸಿಎನ್‍ಸಿ ಆಶ್ರಯದಲ್ಲಿ ಮಡಿಕೇರಿ ಗಾಂಧಿ ಮೈದಾನದಲ್ಲಿ ನಡೆಯಲಿರುವ 27ನೇ ವರ್ಷದ ಕೊಡವ ನ್ಯಾಷನಲ್ ಡೇ ಆಚರಣೆಯ ಯಶಸ್ವಿ ಹಾಗೂ ಡಾ. ಸ್ವಾಮಿ ಅವರ ಉನ್ನತಿಗಾಗಿ ಸಿಎನ್‍ಸಿ ವತಿಯಿಂದ ಕೊಡವರ ಕುಲದೈವ ಪಾಡಿ ಶ್ರೀ ಇಗ್ಗುತ್ತಪ್ಪ ದೇವರಿಗೆ ಮಹಾಪೂಜೆ, ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ಎನ್.ಯು. ನಾಚಪ್ಪ ಕೊಡವ ಲ್ಯಾಂಡ್ ಹಕ್ಕೊತ್ತಾಯ, ಕೊಡವ ಬುಡಕಟ್ಟು ಕುಲಕ್ಕೆ ರಾಜ್ಯಾಂಗ ಭದ್ರತೆ, ಕೊಡವ ಭಾಷೆಗೆ ಸಂವಿಧಾನದ 8ನೇ ಪರಿಚ್ಚೇದ ಸೇರ್ಪಡೆಯ ಕಾರ್ಯ ಆದಷ್ಟು ಶೀಘ್ರವಾಗಿ ಕೈಗೂಡುವಂತೆ ದೇವರಲ್ಲಿa ಪ್ರಾರ್ಥಿಸಲಾಯಿತು. ನಾಡಿನ ಜನ ಈ ಬೇಡಿಕೆಯ ಸಾಕ್ಷೀಕರಣಕ್ಕಾಗಿ ನಡೆಯಲಿರುವ ಕೊಡವ ನ್ಯಾಷನಲ್ ಡೇ ಗೆ ಬಂದು ಭಾಗವಹಿಸುವಂತಾಗಬೇಕು. ಕಾರ್ಯಕ್ರಮ ನಿರ್ವಿಘ್ನವಾಗಿ ನಡೆದು ಕೊಡವರ ಸ್ವಾತಂತ್ರ್ಯಾನ್ವೇಷಣೆಯ ಧ್ವನಿ ಜಗತ್ತಿನ ನಾಲ್ಕು ದಿಕ್ಕುಗಳಿಗೆ ಪಸರಿಸುವಂತಾಗಬೇಕು. ಡಾ. ಸ್ವಾಮಿಯವರ ಪಾದಸ್ಪರ್ಶದ ಸಂಭ್ರಮವು ಕೊಡವರ ಬುಡಕಟ್ಟು ಕುಲದ ಬದುಕು, ಭವಿಷ್ಯಕ್ಕೆ ಅತ್ಯಂತ ಆಶಾದಾಯಕ ಬೆಳಕಾಗಲಿ ಎಂದು ಪ್ರಾರ್ಥಿಸಿಕೊಳ್ಳಲಾಯಿತು ಎಂದರು.
ಕಾರ್ಯಕ್ರಮದಲ್ಲಿ ಸಿಎನ್‍ಸಿಯ ಕಲಿಯಂಡ ಪ್ರಕಾಶ್, ಅಪ್ಪಚ್ಚಿರ ರೆಮ್ಮಿ ನಾಣಯ್ಯ, ಪುಲ್ಲೇರ ಕಾಳಪ್ಪ, ಕಾಟುಮಣಿಯಂಡ ಉಮೇಶ್, ಕಲಿಯಂಡ ಮೀನಾ, ಅಪ್ಪಚ್ಚಿರ ಬೋಪಣ್ಣ, ಕಲಿಯಂಡ ಸುಬ್ಬಯ್ಯ, ಬೇಪುಡಿಯಂಡ ದಿನು, ಇದ್ದರು.