ಸೋಮವಾರಪೇಟೆ, ನ. 22: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಕ್ಕಲಿಗ ಗೌಡ ಸಂಘದ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಯಡವನಾಡು ಸ.ಪ್ರಾ. ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದ ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯ ಪ್ರಥಮ ಬಹುಮಾನವನ್ನು ಸಬಿತಾ ತಂಡ ಪಡೆಯಿತು. ಶೈಲಾ ತಂಡ ದ್ವಿತೀಯ ಸ್ಥಾನ ಪಡೆಯಿತು. ಪುರುಷರ ಹಗ್ಗ ಜಗ್ಗಾಟದಲ್ಲಿ ಶರತ್ ತಂಡ ಪ್ರಥಮ ಹಾಗೂ ಜಯಪ್ಪ ತಂಡ ದ್ವಿತೀಯ ಸ್ಥಾನ ಗಳಿಸಿತು. 7 ರಿಂದ 10 ವರ್ಷದೊಳಗಿನ ಬಾಲಕಿಯರ ವಿಭಾಗದ ಓಟದ ಸ್ಪರ್ಧೆಯಲ್ಲಿ ಡಿ.ಪಿ. ಇಂಚರ (ಪ್ರ), ನಂದಿತ (ದ್ವಿ), 10 ರಿಂದ 15 ವರ್ಷದ ವಿಭಾಗದಲ್ಲಿ ನೂತನ್ (ಪ್ರ), ಮಾನ್ಯಗೌಡ (ದ್ವಿ), 15 ರಿಂದ 25 ವರ್ಷದೊಳಗಿನ ವಿಭಾಗದಲ್ಲಿ ಜಾನ್ಸಿ (ಪ್ರ), ಭೂಮಿಕ ದ್ವಿತೀಯ ಸ್ಥಾನ ಗಳಿಸಿದರು.
ಬಾಲಕರ 10 ವರ್ಷದೊಳಗಿನ ವಿಭಾಗದ ಓಟದ ಸ್ಪರ್ಧೆಯಲ್ಲಿ ಧರ್ಮ ಪ್ರಸಾದ್ (ಪ್ರ), ರಷಿತ್ ಮಾದಪ್ಪ (ದ್ವಿ), 15 ವರ್ಷದೊಳಗಿನ ವಿಭಾಗದಲ್ಲಿ ಚಂದ್ರಶೇಖರ್ (ಪ್ರ), ಪ್ರಖ್ಯಾತ್ (ದ್ವಿ), ಮಕ್ಕಳ ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ದೈವಿಕ ವಿಜಯ್ (ಪ್ರ), ಮಾನ್ಯ ದ್ವಿತೀಯ ಸ್ಥಾನ ಗಳಿಸಿದರು. ಪುರುಷರ ಓಟದ ಸ್ಪರ್ಧೆಯಲ್ಲಿ ಕವನ್ (ಪ್ರ), ಅಶ್ವತ್ ದ್ವಿತೀಯ ಸ್ಥಾನಗಳಿಸಿದರು.
ನಿದಾನ ಬೈಕ್ ಚಾಲನೆ ಸ್ಪರ್ಧೆಯಲ್ಲಿ ಕೆ.ಸಿ. ಸಚಿನ್ (ಪ್ರ), ಎನ್.ಆರ್. ಪ್ರಶಾಂತ್ (ದ್ವಿ), ಭಾರದ ಗುಂಡು ಎಸೆತದಲ್ಲಿ ಜಯಪ್ರಕಾಶ್ (ಪ್ರ), ಕೆ.ಜೆ. ರಾಜ (ದ್ವಿ), ವಿಷದ ಚೆಂಡು ಸ್ಪರ್ಧೆಯಲ್ಲಿ ಸುರಕ್ಷಾ (ಪ್ರ), ಪ್ರಮೀಳಾ ಲೋಕೇಶ್ (ದ್ವಿ), ಮಹಿಳೆಯರ ಬಸ್ ಹುಡುಕಾಟದಲ್ಲಿ ಲಕ್ಷ್ಮಿತಾ (ಪ್ರ), ಲೋಹಿತಾಕ್ಷಿ (ದ್ವಿ)ಸ್ಥಾನ ಗಳಿಸಿದರು.
ಯಡವನಾಡು ಸರ್ಕಾರಿ ಶಾಲಾ ಮೈದಾನದಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾಜಿ ಸಚಿವ ಬಿ.ಎ. ಜೀವಿಜಯ, ಐಗೂರು ಗ್ರಾ.ಪಂ. ವ್ಯಾಪ್ತಿಯ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಡಿ.ಎಸ್. ಚಂಗಪ್ಪ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ತಾಲೂಕು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್, ಜಿ.ಪಂ. ಸದಸ್ಯರಾದ ಕೆ.ಪಿ. ಚಂದ್ರಕಲಾ, ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯೆ ಸಬಿತಾ ಚನ್ನಕೇಶವ ಬಹುಮಾನ ವಿತರಿಸಿದರು.