ಮಡಿಕೇರಿ, ನ. 22: ಕೊಡಗು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಮತ್ತು ಮಡಿಕೇರಿ ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಜರುಗಿದ ಅಂತರ ಶಾಲಾ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ತಂಡ ಚೌರೀರ ಮಧು ಮೇದಪ್ಪ ಸ್ಮರಣಾರ್ಥ ರೋಲಿಂಗ್ ಚಾಂಪಿಯನ್ ಟ್ರೋಫಿ ಪಡೆದಿದೆ. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೂರ್ಗ್ ಬ್ಯಾಡ್ಮಿಂಟನ್ ಅಸೋಸಿ ಯೇಷನ್ ಸಲಹೆಗಾರ್ತಿ ಕಾವೇರಿ ಪೆÇನ್ನಪ್ಪ, ತನ್ನ ಪುತ್ರಿ ಅಶ್ವಿನಿ ಪೆÇನ್ನಪ್ಪ ಅಥ್ಲೆಟಿಕ್ಸ್‍ನೊಂದಿಗೆ ಬ್ಯಾಡ್ಮಿಂಟನ್ ನಲ್ಲಿಯೂ ಸಾಧನೆ ಮಾಡಲು ಕೊಡಗಿನವರಲ್ಲಿರುವ ರಕ್ತಗತವಾದ ಕ್ರೀಡಾ ಪ್ರತಿಭೆಯೇ ಮುಖ್ಯ ಕಾರಣ ಎಂದರಲ್ಲದೇ, ಕೊಡಗಿನ ಅನೇಕ ಯುವ ಕ್ರೀಡಾ ಪ್ರತಿಭೆಗಳಿಗೆ ರಾಷ್ಟ್ರೀಯ ಮಟ್ಟದಲ್ಲಿಯೂ ಸಾಧನೆ ಮಾಡಬಲ್ಲ ಸಾಮಥ್ರ್ಯವಿದೆ. ಮುಖ್ಯವಾಗಿ, ಪೆÇೀಷಕರು, ಶಿಕ್ಷಕರು ಕ್ರೀಡಾ ಪ್ರತಿಭೆಗಳನ್ನು ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಒತ್ತಡ ಹೇರದೆ ಕ್ರೀಡೆಯಲ್ಲಿಯೇ ಮುಂದುವರೆಯಲು ಪೆÇ್ರೀತ್ಸಾಹ ನೀಡಬೇಕೆಂದು ಸಲಹೆ ನೀಡಿದರು.

ಬೆಂಗಳೂರಿನ ಉದ್ಯಮಿ ಅರೆಯಡ ಪೆÇನ್ನಣ್ಣ ಮಾತನಾಡಿ, ಕೊಡಗು ಕ್ರೀಡೆಗೆ ಹೆಸರಾದ ಜಿಲ್ಲೆಯಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಯುವ ಕ್ರೀಡಾ ಪಟುಗಳು ಈ ಜಿಲ್ಲೆಯಿಂದ ಹೊರಹೊಮ್ಮು ತ್ತಿರುವದು ಕ್ರೀಡಾ ಜಿಲ್ಲೆಯ ಹೆಸರು ಮುಂದಿನ ವರ್ಷಗಳಲ್ಲಿಯೂ ಉಳಿಯುವ ಭರವಸೆ ಮೂಡಿಸಿದೆ ಎಂದು ಶ್ಲಾಘಿಸಿದರು.

ಬ್ಲೂ ಡಾರ್ಟ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಬಾಚೆಟ್ಟೀರ ಸಿ. ಕಾಳಪ್ಪ ಮಾತನಾಡಿ, ಇಂದಿನ ಯುವಪೀಳಿಗೆಗೆ ಸಾಕಷ್ಟು ಅವಕಾಶಗಳು ದೊರಕುತ್ತಿದ್ದು, ಇಂಥ ಅವಕಾಶಗಳನ್ನು ಬಳಸಿಕೊಂಡು ಕ್ರೀಡಾಕ್ಷೇತ್ರದಲ್ಲಿ ಮುನ್ನುಗ್ಗಿ ಎಂದು ಕರೆ ನೀಡಿದರು. ಬ್ಯಾಡ್ಮಿಂಟನ್ ಅಸೋಸಿ ಯೇಷನ್ ಜಿಲ್ಲಾಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಮಾತನಾಡಿ, ಈ ಬಾರಿಯ ಪಂದ್ಯಾವಳಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕ್ರೀಡಾರ್ಥಿಗಳು ಪಾಲ್ಗೊಂಡಿದ್ದಾರೆ. 50 ಶಾಲೆಗಳ 200 ಸ್ಪರ್ಧಿಗಳು ಅಂತರ ಶಾಲಾ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಮಡಿಕೇರಿ ರೋಟರಿ ಅಧ್ಯಕ್ಷ ಪಿ.ಯು. ಪ್ರೀತಮ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ., ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಲತಾ ಚಂಗಪ್ಪ, ಟ್ರೋಫಿ ದಾನಿಗಳಾದ ಬೊಳ್ಳು ಮೇದಪ್ಪ, ಕ್ಲಬ್ ಮಹೀಂದ್ರ ರೆಸಾರ್ಟ್‍ನ ಮುಖ್ಯ ಬಾಣಸಿಗ ದೇಬರಾಜ್ ಹಾಜರಿದ್ದರು. ಪಂದ್ಯಾವಳಿ ಸಮಿತಿಯ ಸಂಚಾಲಕ ದಿನೇಶ್ ಕಾರ್ಯಪ್ಪ ಸ್ವಾಗತಿಸಿ, ರಶ್ಮಿ ದೇವಯ್ಯ ವಂದಿಸಿದರು.

ಅಂತರಶಾಲಾ ಬ್ಯಾಡ್ಮಿಂಟನ್ ಸ್ಪರ್ಧೆಯ ವಿಜೇತ ತಂಡಗಳು: ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗ- ಸಂತ ಜೋಸೇಫ್ ಕಾನ್ವೆಂಟ್, ಮಡಿಕೇರಿ (ಪ್ರಥಮ), ಭಾರತೀಯ ವಿದ್ಯಾಭವನ - ಕೊಡಗು ವಿದ್ಯಾ ಲಯ ಮಡಿಕೇರಿ (ದ್ವಿತೀಯ). ಪ್ರಾಥಮಿಕ ಶಾಲಾ ಬಾಲಕರ ವಿಭಾಗ - ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ, ಮಡಿಕೇರಿ (ಪ್ರಥಮ), ಶ್ರೀ ರಾಮಟ್ರಸ್ಟ್ ನಾಪೆÇೀಕ್ಲು (ದ್ವಿತೀಯ). ಪ್ರೌಢಶಾಲಾ ಬಾಲಕಿಯರ ವಿಭಾಗ - ಕುಶಾಲನಗರ ಫಾತಿಮಾ ಶಾಲೆ (ಪ್ರಥಮ), ವೀರಾಜಪೇಟೆ ಕಾವೇರಿ ಹೈಸ್ಕೂಲ್ (ದ್ವಿತೀಯ). ಪ್ರೌಢಶಾಲಾ ಬಾಲಕರ ವಿಭಾಗ - ಶಾಂತಿನಿಕೇತನ ಕೊಡಗರಹಳ್ಳಿ (ಪ್ರಥಮ), ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ (ದ್ವಿತೀಯ). ಪಿ.ಯು. ಬಾಲಕಿಯರ ವಿಭಾಗ - ಪೆÇನ್ನಂಪೇಟೆ ಸಿಐಟಿ (ಪ್ರಥಮ), ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ (ದ್ವಿತೀಯ). ಪಿ.ಯು. ಬಾಲಕರ ವಿಭಾಗ - ವಿವೇಕಾನಂದ ಪಿಯು ಕಾಲೇಜ್ ಕುಶಾಲನಗರ (ಪ್ರಥಮ), ಸಂತ ಅನ್ನಮ್ಮ ವೀರಾಜಪೇಟೆ (ದ್ವಿತೀಯ). ರೋಟರಿ ಕ್ಲಬ್ ಗಳ ನಡುವಿನ ಪಂದ್ಯಾಟ - ಪುರುಷರ ಸಿಂಗಲ್ಸ್ - ಮಿಸ್ಟಿ ಹಿಲ್ಸ್ ನ ಅನೂಪ್ (ಪ್ರಥಮ), ಮಡಿಕೇರಿ ರೋಟರಿಯ ಡಾ. ರಾಘವನ್ (ದ್ವಿತೀಯ). ಮೆನ್ಸ್ ಡಬಲ್ಸ್ - ಮಡಿಕೇರಿ ಮಿಸ್ಟಿ ಹಿಲ್ಸ್ ನ ಅನೂಪ್ ಮತ್ತು ಲವೀನ್ (ಪ್ರಥಮ), ಮಿಸ್ಟಿ ಹಿಲ್ಸ್ ನ ಅಜಿತ್ ನಾಣಯ್ಯ ಹಾಗೂ ದಿನೇಶ್ ಕಾರ್ಯಪ್ಪ (ದ್ವಿತೀಯ). 45 ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್ - ಅಜಿತ್ ನಾಣಯ್ಯ, ಚಿಂಗಪ್ಪ (ಪ್ರಥಮ), ಡಾ. ಮೋಹನ್ ಅಪ್ಪಾಜಿ, ಡಾ. ರಾಘವನ್ (ದ್ವಿತೀಯ). ಮಿಕ್ಸ್ ಡಬಲ್ಸ್- ಮಿಸ್ಟಿ ಹಿಲ್ಸ್‍ನ ಮಧುಸೂದನ್, ಗಾನಾ ಪ್ರಶಾಂತ್ (ಪ್ರಥಮ) ಮಡಿಕೇರಿ ರೋಟರಿಯ ಡಾ. ಮೋಹನ್ ಅಪ್ಪಾಜಿ, ರಶ್ಮಿ ದೇವಯ್ಯ (ದ್ವಿತೀಯ).