ಮಡಿಕೇರಿ, ನ. 22: ನಗರದ ಕಾವೇರಿಹಾಲ್‍ನಲ್ಲಿ ನಡೆದ ರಾಜ್ಯಮಟ್ಟದ ಟೆಕ್ವಾಂಡೊ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕೊಡಗು ಜಿಲ್ಲಾ ಟೆಕ್ವಾಂಡೊ ಸ್ಪೋಟ್ರ್ಸ್ ಸಂಸ್ಥೆಯ ವಿದ್ಯಾರ್ಥಿಗಳು 2 ಚಿನ್ನ, 4 ಬೆಳ್ಳಿ ಹಾಗೂ 12 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಚಿನ್ನದ ಪದಕ ಗೆದ್ದ ಕೋಚನ ರುಚಿ ಅರುಣ್ ಹಾಗೂ ಬಿ.ಎಸ್. ದೃತಿ ಹೃಷಿಕಾ ಇವರು ಡಿ. 7 ರಿಂದ 9 ರವರೆಗೆ ಧಾರವಾಡದಲ್ಲಿ ನಡೆಯುವ ರಾಷ್ಟ್ರಮಟ್ಟದ ಟೆಕ್ವಾಂಡೊ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷರಾದ ಬಿ.ಜಿ. ಲೋಕೇಶ್ ರೈ ತಿಳಿಸಿದ್ದಾರೆ.

ಅಲಿಝೂಡನೀನ್, ಸಪ್ನ ಎಂ.ಎಸ್, ಕರಣ್ ದಿವಾಕರ್, ಬಿ. ಫಾತಿಮಾ ಸುಫೈನ ಬೆಳ್ಳಿ ಪದಕ ಗೆದ್ದಿದ್ದರೆ, ಕಂಚಿನ ಪದಕವನ್ನು ಬೃಹತ್ ಬೋಪಯ್ಯ, ಯಶಸ್ ಎಂ.ಡಿ, ಅರ್ವಿನ್ ಥಾಮಸ್, ಪ್ರಜ್ಞಾ ವೇಲಾಯುಧನ್, ತಾನಿಯಾ ಬಿ. ಶಂಕರ್, ಕಟ್ರತನ ಧನಶ್ರೀ ವೆಂಕಟೇಶ್, ಕರನ್ ಎನ್, ನಮನ್ ಬೆಳ್ಯಪ್ಪ ಎ.ಯು., ನಿಕೇಶ್ ಪಿ.ಜಿ, ಮೃದುಲ್ ಎಂ.ಆರ್., ಕೆ.ಕೆ. ಸೋನಲ್ ಸೀತಮ್ಮ ಹಾಗೂ ಬಿ.ಆರ್. ಯಜ್ಞ ಗೆದ್ದಿದ್ದಾರೆ.