ವೀರಾಜಪೇಟೆ, ನ. 21: ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಕಾಕೋಟುಪರಂಬು ಹಾಗೂ ಹಾಕಿ ಕೊಡಗು ಸಂಸ್ಥೆಯ ಸಹಯೋಗದಲ್ಲಿ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ 5ನೇ ವರ್ಷದ ನಾಕೌಟ್ ಹಾಕಿ ಪಂದ್ಯಾಟದಲ್ಲಿ ಯುನೈಟೆಡ್ ಸ್ಪೋಟ್ಸ್ ಕ್ಲಬ್ ಮಡಿಕೇರಿ, ಡ್ರಿಬಲರ್ಸ್ ಕುತ್ತುನಾಡು, ಬ್ಲೂಸ್ಟಾರ್ ಪೊದ್ದಮಾನಿ, ಹಾಗೂ ಬೇತು ಯೂತ್ ಕ್ಲಬ್ ತಂಡಗಳು ಮುಂದಿನ ಸುತ್ತಿಗೆ ಆರ್ಹತೆ ಪಡೆದುಕೊಂಡಿದೆ.

ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ ಮಡಿಕೇರಿ ತಂಡವು 4-1 ಗೋಲುಗಳಿಂದ ಆರ್‍ಎಸ್‍ಸಿ ಬಾಡಗ ತಂಡವನ್ನು ಪರಾಭವಗೊಳಿಸಿತು. ಯುನೈಟೆಡ್ ತಂಡದ ಪರ ಸಣ್ಣಹನುಮ (11ನಿ), ಫೈಸಲ್ (13ನಿ), ಲಿತೀಶ್ ಬಿದ್ದ¥ À್ಪ(28,55ನಿ), ಪರಾಜಿತ ತಂಡದ ಪರ ಸತೀಶ್ (24ನಿ)ದಲ್ಲಿ ಗೋಲು ದಾಖಲಿಸಿದರು.

ಡ್ರಿಬಲರ್ಸ್ ಕುತ್ತುನಾಡು ತಂಡವು 4-2 ಗೋಲುಗಳಿಂದ ಮಡಿಕೇರಿ ಚಾರ್ಮರ್ಸ್ ತಂಡವನ್ನು ಮಣಿಸಿತು. ಡ್ರಿಬಲರ್ಸ್ ಪರ ಲಿಖಿತ್ (12,53ನಿ), ಮೋಕ್ಷಿತ್ (31,52ನಿ), ಚಾರ್ಮರ್ಸ್ ಮಡಿಕೇರಿ ಪರ ಕೀರ್ತಿ (36ನಿ), ಪಾರಿ (48ನಿ)ದಲ್ಲಿ ಗೋಲು ಬಾರಿಸಿ ಗೋಲಿನ ಅಂತರವನ್ನು ಕಡಿಮೆಗೊಳಿಸಿದರು.

ಬ್ಲೂಸ್ಟಾರ್ ಪೊದ್ದಮಾನಿ ತಂಡವು 3-0 ಗೋಲಿನಿಂದ ಮಲ್ನಾಡ್ ಸ್ಪೋಟ್ರ್ಸ್ ಕ್ಲಬ್ ಹುದಿಕೇರಿ ತಂಡವನ್ನು ನಿರಾಯಾಸವಾಗಿ ಸೋಲಿಸಿತು. ಬ್ಲೂಸ್ಟಾರ್ ಪರ ಭರತ್ (5ನಿ), ಸುಂದರಿರಾಜ್ (50ನಿ), ಆಂಜನೇಯ (51ನಿ)ದಲ್ಲಿ ಗೋಲು ದಾಖಲಿಸಿದರು.

ಬೇತು ಯೂತ್ ಕ್ಲಬ್ ತಂಡವು 4-0 ಗೋಲುಗಳಿಂದ ಕೋಣನಕಟ್ಟೆ ತಂಡವನ್ನು ಪರಾಭವಗೊಳಿಸಿತು. ಏಕ ಪಕ್ಷೀಯವಾಗಿದ್ದ ಪಂದ್ಯದಲ್ಲಿ ಬೇತು ತಂಡದ ಪರ ಸುಧಾಕರ್ (6,27ನಿ), ಮೋಹನ್(20ನಿ), ರಾಕೇಶ್ (37ನಿ)ದಲ್ಲಿ ಗೋಲು ದಾಖಲಿಸಿದರು.