ವೀರಾಜಪೇಟೆ, ನ. 10: ವೀರಾಜಪೇಟೆಯಲ್ಲಿ ತಾ. 11 ರಿಂದ 21 ರವರೆಗೆ 10 ದಿನಗಳ ಕಲಾ ಉತ್ಸವ ಕೊಡಗು 2017 ಎಂಬ ಹೆಸರಿನಲ್ಲಿ ಚಿತ್ರಕಲೆ, ಶಿಲ್ಪಕಲೆ ಪ್ರತಿಷ್ಠಾಪನಾ ಕಲೆ ಹಾಗೂ ಛಾಯಾ ಚಿತ್ರಗಳ ನಿರ್ಮಾಣ ಮತ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಸಾದಿಕ್ ಆಟ್ರ್ಸ್ ಲಿಂಕ್‍ನ ನಿರ್ದೇಶಕರು, ಕಲಾ ಉತ್ಸವ ಕೊಡಗು 2017 ಇದರ ಸಂಚಾಲಕರೂ, ಚಿತ್ರಕಲಾವಿದರೂ ಆದ ಸಾಧಿಕ್ ಹಂಝ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ವಿನೂತನವಾದ ಈ ಪ್ರದರ್ಶನ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ವಿಜೇತರಾದ ಮತ್ತು ಹಲವು ರೀತಿಯ ಸಾಧನೆಗೈದ ಚಿತ್ರ ಕಲಾವಿದರು ಮತ್ತು ಛಾಯಾ ಚಿತ್ರಗಾರರು ಪಾಲ್ಗೊಳ್ಳಲಿದ್ದಾರೆ. ಹೊರ ರಾಜ್ಯಗಳ ಕಲಾವಿದರನ್ನು ಜಿಲ್ಲೆಯ ಕಲಾವಿದರಿಗೆ ಮತ್ತು ಜನತೆಗೆ ಪರಿಚಯಿಸುವ ಕಾರ್ಯ ಮತು ್ತಅವರ ಪ್ರತಿಭೆಗಳ ಪ್ರದರ್ಶನ ಇದÀರ ಉದ್ದೇಶವಾಗಿದೆ. ಪ್ರಮುಖವಾಗಿ ಚಿತ್ರಕಲೆ, ಶಿಲ್ಪಕಲೆ, ಪ್ರತಿಷ್ಠಾಪನಾ ಕಲೆಗಳ ಪ್ರದರ್ಶನ ಮತ್ತು ನಿರ್ಮಾಣ ನಡೆಯಲಿದೆ. ಕಲೆಯ ಬಗ್ಗೆ ಸಂವಾದ, ಚರ್ಚೆ, ಅನಿಸಿಕೆಗಳು ಏರ್ಪಡಿಸ ಲಾಗಿದೆ. ಉತ್ತಮ ಸಾಧನೆಗೈದ ಕಲಾವಿದರುಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಕೆ.ವಿ. ಜ್ಯೋತಿಲಾಲ್, ಶಹಜಹಾನ್ ಮೂವೇರಿ, ಸಿ. ರಾಜಪ್ಪನ್ ಆಚಾರಿ ಮುಂತಾದವರು ಉತ್ಸವದ ಪ್ರಮುಖ ಆಕರ್ಷಕಣೆಯಾಗಲಿದ್ದಾರೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆÉಯ ಸಹಯೋಗದೊಂದಿಗೆ ನಡೆಸುವ ಕಲಾ ಕೊಡಗು ಉತ್ಸವದ ಉದ್ಘಾಟನಾ ಸಮಾರಂಭವು ಸೇರಿದಂತೆ ವಿವಿಧ ಅಧಿವೇಶ&divound;ಗಳಲ್ಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಉದ್ಯಮಿಗಳು, ಸಮಾಜ ಸೇವಕರೂ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ವೀರಾಜಪೇಟೆ- ಮಡಿಕೇರಿ ರಸ್ತೆಯ ಕುಕ್ಲೂರಿನ ಜಾನ್ಸನ್ ಇಂಡಸ್ಟ್ರೀಸ್ ನಲ್ಲಿರುವ ಸಾಧಿಕ್ ಆಟ್ರ್ಸ್ ಲಿಂಕ್ ಕಲಾಭೂಮಿಯಲ್ಲಿ ಈ ಪ್ರದರ್ಶನ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9845820257 ಅಥವಾ 9008430012 ಸಂಖ್ಯೆ ಯನ್ನು ಸಂಪರ್ಕಿಸಬಹುದಾಗಿ ತಿಳಿಸಿದ್ದಾರೆ. ಈ ಬಗ್ಗೆ ತಾಲೂಕಿನ ಎಲ್ಲಾ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗೆ ಪ್ರದರ್ಶನದ ಅವಕಾಶ ಮತ್ತು ಚಿತ್ರ ಕಲಾ ಸ್ಪಧೆರ್Éಯಲ್ಲಿ ಭಾಗವಹಿಸಲು ಸಂಬಂಧಪಟ್ಟ ಇಲಾಖೆ ಅನುಮತಿ ನೀಡಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಜಿಲ್ಲೆಯ ಹಿರಿಯ ಚಿತ್ರಕಲಾ ಶಿಕ್ಷಕ ಬಿ.ಆರ್. ಸತೀಶ್ ಕುಮಾರ್, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಮೈಸೂರಿನ ಕೆ. ಸುರೇಶ್ ಹಾಜರಿದ್ದರು.