ನಾಪೆÇೀಕ್ಲು, ನ. 10: ಸ್ಥಳೀಯ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸುಮಾರು ರೂ. 60 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಆಡಳಿತ ಮಂಡಳಿ ಕಟ್ಟಡವನ್ನು ಸೊಮವಾರಪೇಟೆ ದಾನಿ ಬಿದ್ದಾಟಂಡ ಗಣಪತಿ ಮತ್ತು ಪವನ್ ಮುತ್ತಪ್ಪ ಜಂಟಿಯಾಗಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್ ಆಡಳಿತ ಮಂಡಳಿಯ ಬೊಪ್ಪಂಡ ಕುಶಾಲಪ್ಪ (ನಿವೃತ್ತ ಪೊಲೀಸ್ ಡಿವೈಸ್‍ಪಿ) ಟ್ರಸ್ಟ್‍ಗೆ ರೂ. 25 ಸಾವಿರ ಉದಾರ ಕೊಡುಗೆಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಆಡಳಿತ ಮಂಡಳಿ ಅಧ್ಯಕ್ಷ ಬೊಪ್ಪಂಡ ಡಾ. ಜಾಲಿ ಬೋಪಯ್ಯ ವಹಿಸಿದ್ದರು. ಟ್ರಸ್ಟ್ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ಟ್ರಸ್ಟಿಗಳಾದ ಅರೆಯಡ ಸೋಮಪ್ಪ, ನಿವೃತ್ತ ಪ್ರಾಂಶುಪಾಲ ಕಲ್ಯಾಟಂಡ ಪೂಣಚ್ಚ, ಮಾತನಾಡಿದರು. ಕಾರ್ಯಕ್ರಮದಲ್ಲಿ ಟ್ರಸ್ಟ್ ಆಡಳಿತ ಮಂಡಳಿಯ ಬಿದ್ದಾಟಂಡ ಪಾಪ ಮುದ್ದಯ್ಯ, ಕಂಗಾಂಡ ಕಾಳಯ್ಯ, ಮಂಡೀರ ಸೋಮಣ್ಣ, ಕೊಂಬಂಡ ಗಣೇಶ್, ನಾಯಕಂಡ ದೀಪು, ಅಪಚ್ಚೀರ ತಿಮ್ಮಯ್ಯ, ನೆರವಂಡ ಸುನೀಲ್, ಅಪ್ಪಾರಂಡ ಅಪ್ಪಯ್ಯ ಮತ್ತು ಎಂ.ಎ. ಮನ್ಸೂರ್ ಆಲಿ, ಅಪ್ಪಾರಂಡ ದೇವಯ್ಯ, ಶಿಕ್ಷಕ, ಸಿಬಂದಿ ವೃಂದದವರು ಇದ್ದು ಪ್ರಾಂಶುಪಾಲೆ ಕಲ್ಯಾಟಂಡ ಶಾರದ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿ, ಸಿಬಂದಿ ಚಂದ್ರಕ¯ ನಿರೂಪಿಸಿ, ಬಿದ್ದಾಟಂಡ ಬೆಳ್ಯಪ್ಪ ವಂದಿಸಿದರು.