ಗೋಣಿಕೊಪ್ಪ, ಅ. 9: ರಾಜ್ಯ ವನವಾಸಿ ಕಲ್ಯಾಣ ವತಿಯಿಂದ ರಾಜ್ಯ ಮಟ್ಟದ ಬಿಲ್ಲುಗಾರಿಕೆ ಹಾಗೂ ಮಾಡ್ರನ್ ಖೋ ಖೋ ಸ್ಪರ್ಧೆ ತಾ. 13 ಮತ್ತು 14ರಂದು ನಡೆಯಲಿದೆ ಎಂದು ವನವಾಸಿ ಕಲ್ಯಾಣ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾತೂರು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾಂಗಣ ದಲ್ಲಿ ನಡೆಯಲಿದೆ. 13 ರಂದು ಅಪರಾಹ್ನ 3 ಗಂಟೆಗೆ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಸ್ವಾಮಿ ಈಶ ಪ್ರೇಮನಂದಾಜಿ ಉದ್ಘಾಟಿಸಲಿದ್ದಾರೆ.

ಶಾಸಕ ಕೆ.ಜಿ. ಬೋಪಯ್ಯ ಉಪಸ್ಥಿತಿಯಲ್ಲಿ ಜಿ.ಪಂ. ಅದ್ಯಕ್ಷ ಬಿ.ಎ ಹರೀಶ್ ದ್ವಜಾರೋಹಣ ನೆರವೇರಿಸಲಿದ್ದಾರೆ. ಜಿಲ್ಲಾ ವನವಾಸಿ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಪಿ.ಸಿದ್ಧ ಅಧ್ಯಕ್ಷತೆಯಲ್ಲಿ ರಾಜ್ಯ ವನವಾಸಿ ಕಲ್ಯಾಣ ಸಮಿತಿ ಅಧ್ಯಕ್ಷ ವೆಂಕಟೇಶ್ ಸಾಗರ್, ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ, ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್ ತಾ.ಪಂ. ಸದಸ್ಯ ಯರವರ ರಾಜು, ಪ್ರಕಾಶ್, ಹಾತೂರು ಗ್ರಾ.ಪಂ. ಅದ್ಯಕ್ಷೆ ಆಶಾ ಲತಾ, ಉಪಾಧ್ಯಕ್ಷ ಗಿರೀಶ್ ಪೂವಣ್ಣ, ಹಾತೂರು ಪ್ರೌಢಶಾಲೆ ಅಧ್ಯಕ್ಷ ಟಿ.ಎ ಸುಬ್ರಮಣಿ, ಪ್ರಾಥಮಿಕ ಶಾಲಾ ಉಪಾಧ್ಯಕ್ಷ ಶಂಭು ಲಿಂಗಪ್ಪ, ಮುಖ್ಯೋಪಾಧ್ಯಾಯ ಮಹಾದೇವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿ ದ್ದಾರೆ ಎಂದು ತಿಳಿಸಿದರು.

14 ರಂದು ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭ ದಲ್ಲಿ ಶಾಸಕ ಅಪ್ಪಚ್ಚುರಂಜನ್ ಹಾಗೂ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಜಡೇಗೌಡ, ರಾಜ್ಯ ವನವಾಸಿ ಕಲ್ಯಾಣ ಸಹ ಕಾರ್ಯದರ್ಶಿ ಶಾಂತರಾಮ ಸಿದ್ಧಿ, ಜಿ.ಪಂ. ಸದಸ್ಯೆ ಪಂಕಜ, ಪ್ರೌಢಶಾಲೆ ಅಧ್ಯಕ್ಷ ಸುಬ್ರಮಣಿ, ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಚಿಮ್ಮಿ ಮತ್ತು ಡಾ. ಶಿವಪ್ಪ ಉಪಸ್ಥಿತರಿರುವರು ಎಂದು ಹೇಳಿದರು.

ಬಿಲ್ಲುಗಾರಿಕೆ ವಿದ್ಯೆಯಲ್ಲಿ ಪರಿಣಿತಿ ಪಡೆದ ಆಂದ್ರಪ್ರದೇಶದ ಸುಬ್ಬರಾವ್ ಅವರಿಂದ ರಾಮಾಯಣ ಹಾಗೂ ಮಹಾಭಾರತ ಕಾಲದ ಬಿಲ್ವಿಧ್ಯೆ ಪ್ರದರ್ಶನ ನಡೆಯಲಿದೆ. 11 ರಿಂದ 14ರ ವರೆಗೆ ನಡೆಯುವ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಪಶ್ಚಿಮ ಬಂಗಾಳದ ಪ್ರಮೋದ್ ನಂದನ್ ತರಬೇತು ದಾರರಾಗಿ ಭಾಗವಹಿಸಲಿದ್ದಾರೆ.

ಸಬ್‍ಜೂನಿಯರ್ ವಿಭಾಗದಲ್ಲಿ ಬಿಲ್ಲುಗಾರಿಕೆ ವಿದ್ಯೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಪಿ.ಎಂ. ಮಂಜ, ರಾಜೇಂದ್ರ ಪಿ.ಕೆ. ಶರಣು, ಪಿ.ಸಿ. ಮಣಿಕಂಠ, ಜೂನಿಯರ್ ಬಾಲಕರ ವಿಭಾಗದಲ್ಲಿ ಪಿ.ಕೆ. ರಮೇಶ್, ಬಿ.ಕೆ. ಮನು, ವೈ.ಆರ್.ಮಂಜು, ಸೀನಿಯರ್ ಪುರುಷರ ವಿಭಾಗದಲ್ಲಿ ಪಿ.ಆರ್. ಮಧು, ಪಿ.ಎಸ್. ಹರೀಶ್, ಪಿ.ಆರ್. ರಘು, ಪಿ.ಪಿ. ಪಾಪು, ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಪಿ.ಕೆ. ಧಮಯಂತಿ, ಕನ್ಯಾಕುಮಾರಿ, ವೈ.ಆರ್. ಗೀತಾ, ಸೀತಾ ಹಾಗೂ ಸಬ್ ಜೂನಿಯರ್ ಬಾಲಕ ಮಾಡ್ರನ್ ಖೋ ಖೋ ವಿಭಾಗದಲ್ಲಿ ರಾಕೇಶ್, ಸುಬ್ರಮಣಿ, ರವಿ, ಮುತ್ತು, ಅಪ್ಪು, ಭವನ, ಭವಿಷ್ಯ, ಶಿವ, ಮನು, ವೈ.ಎಂ. ಕರ್ಕು ಇವರುಗಳ ನಡುವೆ ಸ್ಪರ್ಧೆ ಪ್ರದರ್ಶನ ನಡೆಯಲಿದೆ ಎಂದು ದೈಹಿಕ ಶಿಕ್ಷಕ ಪಡಿಜ್ಞಾರಂಡ ಪ್ರಭು ಹೇಳಿದರು.