ಕೂಡಿಗೆ, ಅ. 9: ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾರಂಗಿ ನೀರಾವರಿ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆಯ ಸಮೀಪದ ಹಳ್ಳಿ ಪರಿಮಿತಿ ರಸ್ತೆಗಳಲ್ಲಿ ಭಾರೀ ವಾಹನ ಸಂಚಾರದಿಂದಾಗಿ ನಾಲ್ಕು ತಿಂಗಳ ಹಿಂದೆ ನಿರ್ಮಾಣಗೊಂಡ ರಸ್ತೆ ಸಂಪೂರ್ಣ ಹಾಳಾಗಿದೆ. ಸಂಬಧಪಟ್ಟ ನೀರಾವರಿ ಇಲಾಖೆಯವರು ಈ ರಸ್ತೆಯನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಳ್ಳಿ ಪರಿಮಿತಿಯನ್ವಯ ನೀರಾವರಿ ಇಲಾಖೆ ಟೆಂಡರ್ ಕರೆದು ಕಾಮಗಾರಿಯ ಗುತ್ತಿಗೆ ನೀಡಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿತ್ತು. ಈ ರಸ್ತೆಯ ಸಾಮಥ್ರ್ಯವು 10 ಟನ್ ಇದ್ದು, 20 ಟನ್‍ಗೂ ಹೆಚ್ಚು ಸಾಮಥ್ರ್ಯದ ಬೋರ್‍ವೆಲ್ ಲಾರಿಗಳು ಚಲಿಸಿದ್ದರಿಂದ ರಸ್ತೆಯು ತೀರಾ ಹಾಳಾಗಿರುತ್ತದೆ. ಭಾರೀ ವಾಹನಗಳು ಈ ಮಾರ್ಗದಲ್ಲಿ ಚಲಿಸಿ ರಸ್ತೆಯು ಹಾಳಾಗುತ್ತಿದೆ ಎಂದು ನೀರಾವರಿ ಇಲಾಖೆಗೆ ದೂರು ಸಲ್ಲಿಸಿದ್ದರೂ ಇಲಾಖೆಯವರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.