ವೀರಾಜಪೇಟೆ, ಅ. 9: ಸುಣ್ಣದ ಬೀದಿಯಲ್ಲಿರುವ ಬಿಸ್ಮಿಲ್ಲಾ ಶಾವಲಿ ಮಕಾನ್ ಮತ್ತು ಮದೀನ ಮಸೀದಿಯ ವತಿಯಿಂದ ರೂ. 60 ಲಕ್ಷ ವೆಚ್ಚದಲ್ಲಿ ಶಾದಿ ಮಹಲ್ ನಿರ್ಮಿಸಲು ಸಭೆ ತೀರ್ಮಾನಿಸಿತು.
ವಕ್ಫ್ ಮಂಡಳಿಯ ಜಿಲ್ಲಾ ಅಧ್ಯಕ್ಷ ಅಬ್ದುಲ್ ರೆಹಮಾನ್ ಅಧ್ಯಕ್ಷತೆಯಲ್ಲಿ ನಡೆದ ಬಿಸ್ಮಿಲ್ಲಾ ಶಾವಲಿ ಮಕಾನ್ ಹಾಗೂ ಮದೀನ ಮಸೀದಿಯ ಮಹಾಸಭೆಯಲ್ಲಿ ಶಾದಿ ಮಹಲ್ ನಿರ್ಮಾಣ, ಮದೀನ ಮಸೀದಿಯ ಅನಾಥ ಮಕ್ಕಳವಿದ್ಯಾಕೇಂದ್ರಕ್ಕೆ ವಿವಿಧ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಲಾಯಿತು.
ವೇದಿಕೆಯಲ್ಲಿ ವಕ್ಪ್ ಮಂಡಳಿ ಕಾರ್ಯದರ್ಶಿ ಸಾದತ್ ಹುಸೇನ್ ಉಪಸ್ಥಿತರಿದ್ದರು.
ಮಂಡಳಿಗೆ ಆಯ್ಕೆ
ಬಿಸ್ಮಿಲ್ಲಾ ಶಾವಲಿ ಮಕಾನ್ ಹಾಗೂ ಮದೀನ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಎಸ್.ಎಚ್. ಮೈನುದ್ಧೀನ್, ಉಪಾಧ್ಯಕ್ಷರಾಗಿ ಎಂ.ಕೆ.ಕಬೀರ್, ಕಾರ್ಯದರ್ಶಿಯಾಗಿ ಎಂ.ಜಿ. ಫಾಹೀಮ್, ನಿರ್ದೇಶಕರುಗಳಾಗಿ ಎಸ್.ಎಚ್. ಮತೀನ್, ಎಂ.ಐ. ಮುಕ್ತಾರ್, ಮಹಮ್ಮದ್ ಷರೀಫ್, ಯಾಶೀರ್ ಅಹಮ್ಮದ್, ಮನ್ಸೂರ್ ಅಹಮ್ಮದ್ ಸಕ್ಲೇನ್, ಶಕೀಲ್ ಅಹಮ್ಮದ್, ಅಶ್ರಫ್ ಆಲಿ, ತನ್ವೀರ್ ಹಾಗೂ ಎಂ.ಕೆ. ಮುಕ್ತಾರ್ ಆಯ್ಕೆಯಾಗಿದ್ದಾರೆ.