ಮಡಿಕೇರಿ, ಅ. 9: ಪೊನ್ನಂಪೇಟೆಯ ಸಾಯಿಶಂಕರ್ ಪದವಿ ಕಾಲೇಜಿನ ವತಿಯಿಂದ ಪೊನ್ನಂಪೇಟೆಯ ಸಿಂಥೆಟಿಕ್ ಟರ್ಫ್ ಹಾಕಿ ಮೈದಾನದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಅಂತರ ಕಾಲೇಜುಗಳ ನಡುವೆ ಪುಳ್ಳಂಗಡ ಚಿಣ್ಣಪ್ಪ ಸ್ಮರಣಾರ್ಥ ಮಹಿಳಾ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
10 ಕಾಲೇಜು ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು.
ಈ ಪಂದ್ಯಾವಳಿಯ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದ ಶ್ರೀ ಬೋದನಾಂದಸ್ವರೂಪಾನಂದ ಮಹಾರಾಜ್ ದೀಪ ಬೆಳಗಿ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಿದರು, ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ಗ್ರಾಮಪಂಚಾಯಿತಿ ಅಧ್ಯಕೆÀ್ಷ ಸುಮಿತ ಗಣೀಶ ಅವರು ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಯಿಶಂಕರ ಕಾಲೇಜಿನ ಸಂಸ್ಥಾಪಕ ಝರೂ ಗಣಪತಿ ಅವರು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಬೀರೇಗೌಡ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ಹಾಕಿ ಪಂದ್ಯಾವಳಿಯು ಅತ್ಯಂತ ರೋಚಕವಾಗಿದ್ದು, ಮಡಿಕೇರಿಯ ಎಫ್.ಎಮ್.ಕೆ.ಎಮ್.ಸಿ ಕಾಲೇಜು ಪ್ರಥಮ ಸ್ಥಾನ ಹಾಗೂ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ಮೂಡಬಿದರೆ ರನ್ನರ್ ಆಫ್ ಸ್ಥಾನವನ್ನು ಪಡೆಯಿತು. ತೃತೀಯ ಸ್ಥಾನವನ್ನು ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜು ನಿಟ್ಟೆ ಪಡೆದರೆ, 4ನೇ ಸ್ಥಾನವನ್ನು ಪ್ರಥಮ ದರ್ಜೆ ಕಾಲೇಜು ಮೂರ್ನಾಡು ಪಡೆದಿದೆ.
ದೈಹಿಕ ಶಿಕ್ಷಕರಾದ ಚಿಟ್ಟಿಯಪ್ಪ ಅವರು ಉಸ್ತುವಾರಿ ವಹಿಸಿದ್ದರು. ಹರ್ಷ ಮಂದಣ್ಣ ವೀಕ್ಷಕ ವಿವರಣೆ ನೀಡಿದರು.
ಸಾಯಿಶಂಕರ ಕಾಲೇಜಿನ ಉಪನ್ಯಾಸಕ ವೃಂದದವರು ಮತ್ತು ಭೋದÀಕೇತರ ವೃಂದದವರು ವಿದ್ಯಾರ್ಥಿಗಳು ಮತ್ತು ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.