ವೀರಾಜಪೇಟೆ, ಅ. 9: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆಗಳಿಂದ ಮುಂದಿನ ಚುನಾವಣೆಯಲ್ಲಿ ಆಡಳಿತ ಮರುಕಳಿಸಲಿದೆ. ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದತ್ತ ಒಲವು ತೋರುತ್ತಿರುವದರಿಂದ ಪಕ್ಷ ಇನ್ನಷ್ಟು ಪ್ರಾಬಲ್ಯತೆಯನ್ನು ಪಡೆಯುತ್ತಿದೆ ಎಂದು ಪಕ್ಷದ ಜಿಲ್ಲಾ ಸಮಿತಿಯ ಅಧ್ಯಕ್ಷ ಶಿವು ಮಾದಪ್ಪ ಹೇಳಿದರು. ಮನೆ ಮನೆಗೆ ಕಾಂಗ್ರೆಸ್ ಅಭಿಯಾನಕ್ಕೆ ಇಲ್ಲಿನ ಕಲ್ಲುಬಾಣೆಯಲ್ಲಿ ಚಾಲನೆ ಸಭೆಯನ್ನುದ್ದೇಶಿಸಿ ಮಾತನಾಡಿದರು.

ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಹಿಂದುಳಿದ ವರ್ಗಗಳ ಜಿಲ್ಲಾ ಸಮಿತಿಯ ವಿ.ಕೆ.ಸತೀಶ್, ರಮಾನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ ಮತ್ತಿತರರು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದಕಾರ್ಯ ವೈಖರಿಯನ್ನು ಟೀಕಿಸಿದರು.

ಪಕ್ಷದ ತಾಲೂಕು ವಕ್ತಾರ ಟಾಟು ಮೊಣ್ಣಪ್ಪ, ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್.ಎನ್.ಗಾಯಿತ್ರಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿ, ಧರ್ಮಜ ಉತ್ತಪ್ಪ, ಕಾಂಗ್ರೆಸ್ ಸೇವಾ ದಳದ ಸಿ.ಎಸ್.ಕಾವೇರಪ್ಪ, ಎಂ.ಎಲ್.ಸೈನುದ್ದೀನ್, ಮಾಳೇಟಿರ ಬೆಲ್ಲು ಬೋಪಣ್ಣ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜಾನ್ಸನ್, ಕಾವೇರಮ್ಮ, ಏಜಾಜ್ ಅಹಮ್ಮದ್, ಜಿ.ಜಿ. ಮೋಹನ್ ಹಾಜರಿದ್ದರು.

ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಪ್ರಕಟಗೊಂಡ ಮನೆಮನೆಗೆ ಕಾಂಗ್ರೆಸ್ ಎಂಬ ಕಿರು ಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರುಗಳು ಬಿಡುಗಡೆ ಮಾಡಿದರು. ಎಂ.ಎಂ.ಶಶಿಧರನ್ ನಿರೂಪಿಸಿದರು. ಕಾರ್ಯಕ್ರಮದ ನಂತರ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಕಲ್ಲುಬಾಣೆಯಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಕಿರು ಹೊತ್ತಿಗೆಯಲ್ಲಿರುವ ಪಕ್ಷದ ಸಾಧನೆಗಳ ಕಿರು ಹೊತ್ತಿಗೆ ನೀಡಿ ಪಕ್ಷದ ಪರ ಪ್ರಚಾರ ಮಾಡಿದರು.