ಮಡಿಕೇರಿ, ಅ. 9: ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ 16 ನೇ ವಾರ್ಷಿಕೋತ್ಸವದ ಪ್ರಯುಕ್ತ ಪತ್ರಕರ್ತರಿಗೆ ಪತ್ರಿಕಾ ಭವನದಲ್ಲಿ ಟೇಬಲ್ ಟೆನ್ನಿಸ್ ಪಂದ್ಯಾಟ ಆಯೋಜಿಸಲಾಗಿತ್ತು. ಸಿಂಗಲ್ಸ್ ಹಾಗೂ ಡಬ್ಬಲ್ಸ್ ವಿಭಾಗದಲ್ಲಿ ನಡೆದ ಸ್ಫರ್ಧೆಯನ್ನು ಪ್ರಶಾಂತ್ ವುಡ್‍ವಕ್ರ್ಸ್‍ನ ಮಾಲೀಕ ಪ್ರಶಾಂತ್ ಹಾಗೂ ಪತಂಜಲಿ ಸ್ಟೋರ್‍ನ ಮಾಲೀಕ ಮನೋಹರ್ ಉದ್ಘಾಟಿಸಿದರು. ಈ ಸಂದರ್ಭ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್ ಮನುಶೆಣೈ ಕಾರ್ಯಕ್ರಮದ ಸಂಯೋಜಕರಾದ ಕಾಯಪಂಡ. ಶಶಿಸೋಮಯ್ಯ, ಪತ್ರಕರ್ತರಾದ ಜಿ.ವಿ ರವಿಕುಮಾರ್, ಸುರ್ಜಿತ್‍ಕುಮಾರ್, ಅಲ್ಲಾರಂಡ ವಿಠಲ ನಂಜಪ್ಪ, ಜೀವನ್ ಪಾಲಕಾಡ್, ಎಸ್. ಗಣೇಶ್‍ಕುಮಾರ್, ಎಂ.ಎನ್ ನಾಸಿರ್, ಹಾಗೂ ವಿನಯ್ ಉಪಸ್ಥಿತರಿದ್ದರು. ಸಿಂಗಲ್ಸ್‍ನಲ್ಲಿ ಪ್ರಥಮ ಕೊಳಂಬೆ ಉದಯ್ ಮೊಣ್ಣಪ್ಪ, ದ್ವಿತೀಯ ಎಸ್.A ಗಣೇಶ್ ಕುಮಾರ್, ತೃತೀಯ ಜಿ.ವಿ. ರವಿಕುಮಾರ್, ಡಬಲ್ಸ್‍ನಲ್ಲಿ ಪ್ರಥಮ ಜಿ.ವಿ. ರವಿಕುಮಾರ್ ಮತ್ತು ಕೊಳಂಬೆ ಉದಯ್ ಮೊಣ್ಣಪ್ಪ, ದ್ವಿತೀಯ ಕಾಯಪಂಡ ಶಶಿಸೋಮಯ್ಯ ಮತ್ತು ಎಂ.ಎನ್. ನಾಸಿರ್, ತೃತೀಯ ಎಸ್. ಗಣೇಶ್ ಕುಮಾರ್ ಮತ್ತು ಸುರ್ಜೀತ್ ಕುಮಾರ್.