ಸುಂಟಿಕೊಪ್ಪ, ಅ. 9: ಗೌಡ ಜನಾಂಗದ ಯುವಕ ಯುವತಿಯರು ದೈಹಿಕವಾಗಿ ಮಾನಸಿಕವಾಗಿ ಸದೃಢರಾಗುವ ಮೂಲಕ ಆರೋಗ್ಯವನ್ನು ಕಾಪಾಡಿಕೊಂಡು ಉನ್ನತ ಶಿಕ್ಷಣ ಪಡೆಯುವಂತಾಗ ಬೇಕು. ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಪುದಿಯನೆರವನ ಮಹೇಶ ಕರೆ ನೀಡಿದರು.

ಸುಂಟಿಕೊಪ್ಪ ನಾಡು ಗೌಡ ಸಂಘದ 3ನೇ ವಾರ್ಷಿಕ ಮಹಾ ಸಭೆಯ ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಗೌಡ ಸಂಸ್ಕøತಿ ಪದ್ಧತಿ ಆಚಾರ ವಿಚಾರಗಳನ್ನು ಬೆಳೆಸಿ ಉಳಿಸಬೇಕೆಂದು ಅವರು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿ ನಿವೃತ್ತ ಮುಖ್ಯೋಪಾಧ್ಯಾಯ ಬಾರಿಯಂಡ ಆರ್. ಜೋಯಪ್ಪ ಮಾತನಾಡಿ, ಪೋಷಕರು ಮಕ್ಕಳಿಗೆ ವಿದ್ಯೆಯಲ್ಲಿ ಒತ್ತಾಯ ಒತ್ತಡ ಹೇರುವದು ಸರಿಯಲ್ಲ್ಲ ಮಕ್ಕಳ ಮನಸ್ಥಿತಿಯನ್ನು ಪೋಷಕರು ಆರಿತು ಆ ನಿಟ್ಟಿನಲ್ಲಿ ಮುಂದಿನ ಹೆಜ್ಜೆಯಿಡ ಬೇಕೆಂದು ಸಲಹೆ ನೀಡಿದರು.

ಯಾವದೇ ರಾಜಕಾರಣಿಗಳು ಇರಬಹುದು ಅಧಿಕಾರಕ್ಕೆ ಬಂದಾಗ ತಮ್ಮ ಜನಾಂಗದ ಅಭಿವೃದ್ಧಿಗೆ ಆಸಕ್ತಿ ವಹಿಸುವಂತಾಗಬೇಕು. ಅಧಿಕಾರ ಶಾಶ್ವತ ಅಲ್ಲ, ಎಲ್ಲಾ ಜನಾಂಗದಲ್ಲೂ ಅರ್ಥಿಕವಾಗಿ ದುರ್ಬಲರು ಇದ್ದಾರೆ. ಒಕ್ಕಲಿಗ ಹಾಗೂ ಅರೆಗೌಡ ಜನಾಂಗದವರು ಒಟ್ಟಾಗಿ ಸೇರಿ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಗೌಡ ಸಮಾಜದವರು ತಮ್ಮ ಉನ್ನತ ಸಂಸ್ಕøತಿ ಪರಂಪರೆಯನ್ನು ಉಳಿಸುವ ಮೂಲಕ ಸಮಾಜದಲ್ಲಿರುವ ದುರ್ಬಲರನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಮೇಲೆ ತರುವ ಕೆಲಸ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸುಂಟಿಕೊಪ್ಪ ನಾಡು ಗೌಡ ಸಂಘದ ಅಧ್ಯಕ್ಷ ಯಂಕನ ಉಲ್ಲಾಸ, ಮುಖ್ಯ ಅತಿಥಿಗಳಾಗಿದ್ದ ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಾಲಾವತಿ, ಕೃಷಿ ಅಧಿಕಾರಿ ಪಡನೋಳನ ಎಸ್.ಬೋಪಯ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ಚೆಟ್ಟಿಮಾಡ ರಕ್ಷಿತ್ ಗ್ರಾ.ಪಂ. ಸದಸ್ಯೆ ಪಟ್ಟೆಮನೆ ಗಿರಿಜಾ ಉದಯಕುಮಾರ್ ಮಾತನಾಡಿದರು.