ಮಡಿಕೇರಿ, ಅ. 9: ತಾ. 17ರ ತಲಕಾವೇರಿ ತೀರ್ಥೋದ್ಬವ ದಿನದಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತಲಕಾವೇರಿ ಕ್ಷೇತ್ರದಲ್ಲಿ ಜಿಲ್ಲೆಯ ಕವಿಗಳಿಗಾಗಿ ಕವಿಗೋಷ್ಠಿ ಹಾಗೂ ಗೀತಗಾಯನ ಕಾರ್ಯಕ್ರಮ ಆಯೋಸಲಾಗಿದೆ.

ಜಿಲ್ಲೆಯ ಕಸಾಪ ಸದಸ್ಯರಿಗೆ ಮಾತ್ರ ಗೀತಗಾಯನ ಕಾರ್ಯಕ್ರಮದಲ್ಲಿ ಹಾಡಲು ಹಾಗೂ ಕವಿಗೋಷ್ಠಿಗೆ ಅವಕಾಶವಿದೆ.

ಅಂದು ಬೆಳಗ್ಗೆಯಿಂದ ಮಧ್ಯಾಹ್ನ ವರೆಗೆ ಜಿಲ್ಲೆಯ ಗೀತಗಾಯನ ಕಾರ್ಯಕ್ರಮ ಮಧ್ಯಾಹ್ನದ ನಂತರ ಕವಿಗಳಿಗಾಗಿ ಕವಿಗೋಷ್ಠಿ ನಡೆಯಲಿದೆ. ಈ ಎರಡೂ ಕಾರ್ಯಕ್ರಮಗಳಿಗೆ ಕಸಾಪ ಸದಸ್ಯರಿಗೆ ಭಾಗವಹಿಸಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ ಆಸಕ್ತರು ತಾ. 14 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಬಿ.ಎಸ್.ಲೋಕೇಶ್ ಸಾಗರ್ ಅಧ್ಯಕ್ಷರು ಕ.ಸಾಪ. 8277066123, ಮಾಧ್ಯಮ ಕಾರ್ಯದರ್ಶಿ ಕ.ಸಾಪ. ಎನ್.ಎ.ಅಶ್ವತ್ ಕುಮಾರ್ 9448106135 ಇವರನ್ನು ಸಂಪರ್ಕಿಸಬಹುದಾಗಿದೆ.