ಗೋಣಿಕೊಪ್ಪಲು, ಅ. 9: ವೀರಾಜಪೇಟೆ ತಾಲೂಕು ಒಕ್ಕಲಿಗರ ಯುವ ವೇದೀಕೆಯ 2016-17ನೇ ಸಾಲಿನ ಮಹಾ ಸಭೆ ತಾ. 15 ರಂದು ಬೆಳಿಗ್ಗೆ 10.30 ಗಂಟೆಗೆ ಹಾತೂರು ಫ್ರೌಡಶಾಲೆ ಸಭಾಂಗಣದಲ್ಲಿ ನಡೆಯಲಿದೆ.
ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ವಿ.ಎನ್. ಮಹೇಶ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ನಿವೃತ್ತ ಗ್ರಾಮ ಲೆಕ್ಕಿಗ ಗೋಪಾಲಕೃಷ್ಣ ಆಗಮಿಸಲಿದ್ದಾರೆ. ಈ ಸಂದರ್ಭ ಎಸ್.ಎಸ್.ಎಲ್.ಸಿ. ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಮಾಡಲಾಗುವದು.
2016-17ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಒಕ್ಕಲಿಗ ವಿದ್ಯಾರ್ಥಿಗಳು ತಾ. 12 ರೊಳಗೆ ತಮ್ಮ ಅಂಕಪಟ್ಟಿಯನ್ನು ಒಕ್ಕಲಿಗರ ಯುವ ವೇದಿಕೆಯ ನಿರ್ದೇಶಕರುಗಳಿಗೆ ತಲುಪಿಸಬೇಕೆಂದರು. ಹೆಚ್ಚಿನ ಮಾಹಿತಿಗಾಗಿ 9902902999 ಸಂಪರ್ಕಿಸಬೇಕಾಗಿದೆ ಎಂದು ಯುವ ವೇದಿಕೆಯ ಪ್ರ. ಕಾರ್ಯದರ್ಶಿ ಲೋಹಿತ್ ಗೌಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.