ಮಡಿಕೇರಿ, ಸೆ. 14: ಕೂರ್ಗ್ ಹೋಂಸ್ಟೇ ಅಸೋಸಿಯೇಷನ್ನಿಗೆ ನೂತನ ಅಧ್ಯಕ್ಷರಾಗಿ ಬಿ.ಸಿ. ಚೆಂಗಪ್ಪ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಮದನ್ ಸೋಮಣ್ಣ ಅಧಿಕಾರ ಹಸ್ತಾಂತರಿಸಿದರು.

ಉಪಾಧ್ಯಕ್ಷರಾಗಿ ಹೇಮ್ ಮಾದಪ್ಪ, ಕಾರ್ಯದರ್ಶಿಯಾಗಿ ಪ್ರೇಂ ದಂಬೆಕೋಡಿ, ಜಂಟಿ ಕಾರ್ಯದರ್ಶಿಯಾಗಿ ಬಿ.ಜಿ. ಅನಂತಶಯನ, ಖಜಾಂಚಿಯಾಗಿ ಉಷಾ ಗಣಪತಿ ಆಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರಾಗಿ ಡಿ.ಸಿ. ಬೋಪಣ್ಣ, ಎ.ಕೆ. ನವೀನ್, ಟಿ.ಕೆ. ಕಬೀರ್, ಬಾಬಿ, ಕೆ.ಟಿ. ಸಾಗರ್, ಸಾಯಿಗಿರಿ ಬೋಪಣ್ಣ, ಅನಿತಾ ಸೋಮಣ್ಣ, ಸವಿತಾ ಅಪ್ಪಣ್ಣ, ಶಶಿ ಮೊಣ್ಣಪ್ಪ ಆಯ್ಕೆಯಾಗಿದ್ದಾರೆ.

ಮಾಜಿ ಅಧ್ಯಕ್ಷರುಗಳಾದ ದಿಲೀಪ್ ಚೆಂಗಪ್ಪ, ಮಿಕ್ಕಿ ಕಾಳಪ್ಪ, ಕೆ.ಎಂ. ಕರುಂಬಯ್ಯ, ನಳಿನಿ ಅಚ್ಚಯ್ಯ, ಮದನ್ ಸೋಮಣ್ಣ, ಸಲಹೆಗಾರರಾಗಿಯೂ ಆಯ್ಕೆಯಾಗಿದ್ದಾರೆ.