ಮಡಿಕೇರಿ, ಸೆ. 14: ಕೊಡಗು ಜಿಲ್ಲೆಯಲ್ಲಿ ಅಸ್ಸಾಂ ಮೂಲದ ಕಾರ್ಮಿಕರೆಂದು ಹೇಳಿಕೊಂಡು ರಾಷ್ಟ್ರವಿರೋಧಿ ರೊಹಿಂಗ್ಯಗಳು ನೆಲೆಸಿರುವ ಶಂಕೆ ವ್ಯಕ್ತಪಡಿಸಿರುವ ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಕೂಡಲೇ ಅಂತಹವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊಡಗಿನಲ್ಲಿ ರೊಹಿಂಗ್ಯಗಳಿಗೆ ಸಮಾಜಘಾತುಕರು ನೆಲೆ ಕಲ್ಪಿಸಿರುವದಾಗಿ ಆರೋಪಿಸಿದರಲ್ಲದೆ, ಕೂಡಲೇ ಕೇಂದ್ರ ಸರಕಾರ ಉನ್ನತ ಮಟ್ಟದ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆಯೂ ಒತ್ತಾಯಿಸಿದ್ದಾರೆ.

ರೊಹಿಂಗ್ಯಗಳ ಇರುವಿಕೆ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ರವಾನಿಸಿರುವ ನಾಚಪ್ಪ, ಇಂತಹವರಿಗೆ ಜಿಲ್ಲೆಯಲ್ಲಿ ರಾಜಕೀಯ ನೆಲೆಯಲ್ಲಿ ಮತಬ್ಯಾಂಕ್‍ಗಾಗಿ ಪಡಿತರ, ಮತದಾರ ಚೀಟಿ, ಆಧಾರ್ ಕಾರ್ಡ್‍ನಂತಹ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆರೋಪಿಸಿದ್ದಾರೆ.