ಮಡಿಕೇರಿ, ಸೆ. 13: ನೆಹರು ಯುವ ಕೇಂದ್ರ, ಎಫ್.ಎಂ.ಕೆ.ಎಂ.ಸಿ. ಕಾಲೇಜಿನ ಎನ್.ಎಸ್.ಎಸ್. ಘಟಕ, ತಾಲೂಕು ಯುವ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಚ್ಛತೆಯ ಚಿಂತನೆಗಳನ್ನೊಳಗೊಂಡ ಕಾರ್ಯಕ್ರಮದಡಿ 3 ವಿಭಾಗದಲ್ಲಿ ಸ್ಪರ್ಧೆಯನ್ನು ಎಫ್.ಎಂ.ಕೆ.ಎಂ.ಸಿ.ಕಾಲೇಜಿನಲ್ಲಿ ನಡೆಸಿದ್ದು, ಸ್ಪರ್ಧೆಯಲ್ಲಿ ಕಿರುಚಿತ್ರ ವಿಷಯ “ನನ್ನ ದೇಶವನ್ನು ಸ್ವಚ್ಛಗೊಳಿಸಲು ನನ್ನ ಕೊಡುಗೆ”, ಪ್ರಬಂಧ ಸ್ಪರ್ಧೆ ವಿಷಯ ಸ್ವಚ್ಛತೆಗೋಸ್ಕರ ನಾನೇನು ಮಾಡುವೆ, ಚಿತ್ರಕಲೆ ವಿಷಯ “ಸ್ವಚ್ಛ ಭಾರತ ನನ್ನ ಕನಸು”. ಈ ಸ್ಪರ್ಧೆಯಲ್ಲಿ ಜಿಲ್ಲೆಯಿಂದ 50ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿ ದೇಶದ ಅಭಿಮಾನವನ್ನು ತಮ್ಮ ಕೌಶಲ್ಯದ ಮೂಲಕ ಪ್ರದರ್ಶಿಸಿದರು.

ಸ್ಪರ್ಧೆಯ ತೀರ್ಪುಗಾರರಾಗಿ ದನಂಜಯ ಅಗೋಳಿಕಜೆ, ಸಲೀಲ ಪಾಟ್ಕರ್, ಕೆ.ಕೆ. ಮಹೇಶ್ ಕುಮಾರ್ ಇವರುಗಳು ಆಗಮಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಎಫ್.ಎಂ.ಕೆ.ಎಂ.ಸಿ. ಕಾಲೇಜಿನ ಪ್ರಾಂಶುಪಾಲ ಪಾರ್ವತಿ ಅಪ್ಪಯ್ಯ ನೆರವೇರಿಸಿದರು. ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಎಂ.ಬಿ. ಜೋಯಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಡವ ಸಾಹಿತ್ಯ ಅಕಾಡೆಮಿ, ಮಾಜಿ ಅಧ್ಯಕ್ಷೆ ರಾಣಿ ಮಾಚಯ್ಯ, ಕಚೇರಿ ಮೇಲ್ವಿಚಾರಕರಾದ ಎನ್. ಫ್ರಾನ್ಸಿಸ್, ಸಹಾಯಕ ಲೆಕ್ಕಾಧಿಕಾರಿ ಬಿ.ಬಿ. ಮಹೇಶ್ ಉಪಸ್ಥಿತರಿದ್ದರು.