ಕೂಡಿಗೆ, ಸೆ. 13: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ರೈತರು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ವಾಣಿಜ್ಯ ಬೆಳೆಯನ್ನು ಅವಲಂಭಿಸುತ್ತಾ ಬಂದಿದ್ದಾರೆ. ಈ ಸಾಲಿನಲ್ಲಿ ಹೋಬಳಿ ವ್ಯಾಪ್ತಿಯ ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಚಿಕ್ಕಅಳುವಾರ, ಸಿದ್ಧಲಿಂಗಪುರ ವ್ಯಾಪ್ತಿಗಳಲ್ಲಿ 3 ಸಾವಿರಕ್ಕೂ ಹೆಚ್ಚು ಪ್ರದೇಶದ ಜಮೀನಿನಲ್ಲಿ ಶುಂಠಿ ಬೆಳೆ ಬೆಳೆದಿದ್ದಾರೆ. ಶುಂಠಿ ಬೆಳೆ ಬಿತ್ತನೆ ಮಾಡಿ ಮೂರ್ನಾಲ್ಕು ತಿಂಗಳು ಕಳೆದಿದ್ದು, ಶುಂಠಿಯ ಕಾಂಡದಲ್ಲಿ ಅರ್ಧ ಕೆ.ಜಿ.ಯಷ್ಟು ಬೆಳವಣಿಯಾಗಿದೆ. ಇನ್ನೂ ಒಂದೂವರೆ ಕೆ.ಜಿ. ಬೆಳವಣಿಗೆ ಆಗಬೇಕಾಗಿದೆ. ಅಷ್ಟರಲ್ಲೇ ಶುಂಠಿಗೆ ಮಹಾಕಾಳಿ, ಕಡ್ಡಿ ರೋಗ ಸೇರಿದಂತೆ ಕೂಡಿಗೆ, ಸೆ. 13: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ರೈತರು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ವಾಣಿಜ್ಯ ಬೆಳೆಯನ್ನು ಅವಲಂಭಿಸುತ್ತಾ ಬಂದಿದ್ದಾರೆ. ಈ ಸಾಲಿನಲ್ಲಿ ಹೋಬಳಿ ವ್ಯಾಪ್ತಿಯ ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಚಿಕ್ಕಅಳುವಾರ, ಸಿದ್ಧಲಿಂಗಪುರ ವ್ಯಾಪ್ತಿಗಳಲ್ಲಿ 3 ಸಾವಿರಕ್ಕೂ ಹೆಚ್ಚು ಪ್ರದೇಶದ ಜಮೀನಿನಲ್ಲಿ ಶುಂಠಿ ಬೆಳೆ ಬೆಳೆದಿದ್ದಾರೆ. ಶುಂಠಿ ಬೆಳೆ ಬಿತ್ತನೆ ಮಾಡಿ ಮೂರ್ನಾಲ್ಕು ತಿಂಗಳು ಕಳೆದಿದ್ದು, ಶುಂಠಿಯ ಕಾಂಡದಲ್ಲಿ ಅರ್ಧ ಕೆ.ಜಿ.ಯಷ್ಟು ಬೆಳವಣಿಯಾಗಿದೆ. ಇನ್ನೂ ಒಂದೂವರೆ ಕೆ.ಜಿ. ಬೆಳವಣಿಗೆ ಆಗಬೇಕಾಗಿದೆ. ಅಷ್ಟರಲ್ಲೇ ಶುಂಠಿಗೆ ಮಹಾಕಾಳಿ, ಕಡ್ಡಿ ರೋಗ ಸೇರಿದಂತೆ ಸಹಕಾರ ಸಂಘಗಳಲ್ಲಿ ಮತ್ತು ಕೈ ಸಾಲ ಮಾಡಿ ಇದೀಗ ಬೆಳೆಯು ಉತ್ತಮವಾಗಿ ಬಂದಿದ್ದರೂ ರೋಗಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಆತಂಕ ಪಡುತ್ತಿದ್ದಾರೆ.

ಬೇಸಾಯ ಮಾಡುವ ಸಂದರ್ಭ ಒಂದು ಚೀಲಕ್ಕೆ ಮೂರರಿಂದ ನಾಲ್ಕು ಸಾವಿರ ರೂ.ಗಳು ಇದ್ದು, ಇದೀಗ ಬೆಲೆ ಕಡಿತಗೊಂಡು ಕೇವಲ 900 ರೂಪಾಯಿ ಮಾತ್ರ ಬೆಲೆ ಇದೆ. ರೋಗಬಾಧೆ ಕಾಣಿಸಿಕೊಂಡ ಜಮೀನಿನ ಶುಂಠಿಯನ್ನು ಖರೀದಿದಾರರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ರೈತರು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ವಾಣಿಜ್ಯ ಬೆಳೆಯತ್ತ ಮುಖಮಾಡಿದರೂ ಒಂದಲ್ಲ ಒಂದು ರೋಗಕ್ಕೆ ಬೆಳೆಗಳು ತುತ್ತಾಗಿ ಸಂಕಷ್ಟ ಪಡುವ ಪರಿಸ್ಥಿತಿ ಎದುರಾಗಿದೆ.

ಇತ್ತೀಚಿನ ದಿನಗಳಲ್ಲಿ ಹವಾಮಾನದ ವೈಪರೀತ್ಯವೊ ಅಥವಾ ರೈತನ ದುರದೃಷ್ಟವೋ ಏನೊ ರೈತರನ್ನು ಸಂಕಷ್ಟದಲ್ಲಿ ಸಿಲುಕಿಸುತ್ತಿದೆ.

- ಕೆ.ಕೆ. ನಾಗರಾಜಶೆಟ್ಟಿ.