ಕೂಡಿಗೆ, ಸೆ. 13: ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಕೂಡಿಗೆ ಕ್ರೀಡಾಶಾಲೆಯ ಕ್ರೀಡಾಂಗಣದಲ್ಲಿ ನಡೆದ ಸೋಮವಾರಪೇಟೆ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಶಿರಂಗಾಲ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡಿದ್ದಾರೆ.

ಬಾಲಕರ ವಿಭಾಗದಲ್ಲಿ ಎನ್.ಪಿ. ರಾಕೇಶ್ ಮತ್ತು ಬಾಲಕಿಯರ ವಿಭಾಗದಲ್ಲಿ ಎಸ್.ಎಂ. ಅಭಿಲಾಷ್ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡಿದ್ದಾರೆ. ಇವರನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎನ್.ಬಿ. ಮಹೇಶ್, ಪ್ರಾಂಶುಪಾಲ ಎಂ.ಆರ್. ಸುರೇಶ್ ಕುಮಾರ್, ಹಿರಿಯ ಉಪನ್ಯಾಸಕ ಹಂಡ್ರಂಗಿ ನಾಗರಾಜ್ ಮಾರ್ಗದರ್ಶನದಲ್ಲಿ ತಂಡದ ವ್ಯವಸ್ಥಾಪಕರಾಗಿ ಹೆಚ್.ಆರ್. ಶಿವಕುಮಾರ್, ಕೆ.ಎನ್. ಪಲ್ಲವಿ, ವಿ.ಎಂ. ಗಣೇಶ್ ಕಾರ್ಯ ನಿರ್ವಹಿಸಿದ್ದರು.

ಎಸ್.ಎಂ. ದರ್ಶನ್ ಕುಮಾರ್, ಎಂ. ಸುಶ್ಮಿತ, ಎಸ್. ರಾಜಾರಾಮ್, ಎ.ಎ. ಮನುಶ್ರೀ, ಕೆ.ಎಲ್. ಅರ್ಪಿತ, ಎಂ.ಜೆ. ಶಶಾಂಕ್, ಟಿ.ಪಿ. ಕವನ, ಎ.ಎ. ವಿನಯ, ಎಸ್.ಎಸ್. ಸುದೀಪ್, ಎಂ.ಎಂ. ಕಾವ್ಯ, ಹೆಚ್.ಆರ್. ಪರಮೇಶ್, ಎಸ್.ಎಂ. ಪ್ರಶಾಂತ್, ಬಿ.ಕೆ. ಚಂದನ ಇವರುಗಳು ಶಾಟ್‍ಪುಟ್, ವಾಕ್‍ರೇಸ್, ಟ್ರಪಲ್‍ಜಂಪ್, ಹ್ಯಾಮರ್ ಥ್ರೋ, ರಿಲೇ, 100 ಮೀ, ಲಾಂಗ್‍ಜಂಪ್, 200 ಮೀ., 3000 ಮೀ., 800 ಮೀ., 400 ಮೀ., 4*400, 1500 ಮೀಟರ್ ಓಟದಲ್ಲಿ ಭಾಗವಹಿಸಿದ್ದು, ಪ್ರಥಮ 15, ದ್ವಿತೀಯ 6, ತೃತೀಯ 5 ಬಹುಮಾನಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ.